ಉಡುಪಿ : ಇಲ್ಲೊಬ್ಬ ವಿದ್ಯಾರ್ಥಿನಿ ದೇಶದ ಸೈನಿಕರಿಗಾಗಿ ಮಾಸ್ಕ್ ತಯಾರಿಸಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಹೌದು ಯೋಧರಿಗಾಗಿ 300 ಮಾಸ್ಕ್ ಗಳನ್ನು ತಯಾರಿಸಿ ಯೋಧರಿಗೆ ಕಳುಹಿಸಿಕೊಟ್ಟಿದ್ದ ಉಡುಪಿಯ ಇಶಿತಾ ಆಚಾರ್ ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನಾ ಪತ್ರ ಕಳುಹಿಸಿದ್ದಾರೆ.
ಮಣಿಪಾಲದ ಮಾಧವ ಕೃಪ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಇಶಿತಾ ಗೆ ‘ಸೈನಿಕರಿಗೆ ಮಾಸ್ಕ್ ಹೊಲಿದು ಕಳುಹಿಸಿದ್ದಕ್ಕೆ ಧನ್ಯವಾದಗಳು.
ಯೋಧರ ಮೇಲಿರುವ ಆಕೆಯ ಕಾಳಜಿ ಹಾಗೂ ಕೋವಿಡ್–19 ಸೋಂಕು ವಿರುದ್ಧ ಜಾಗೃತಿ ಮೂಡಿಸುತ್ತಿರುವ ಪ್ರಯತ್ನ ಅಭಿನಂದನೀಯ’ ಎಂದು ರಾಜನಾಥ್ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಸೂಚನೆಯಂತೆ ಮಾಸ್ಕ್ ಬ್ಯಾಂಕ್ ಗೆ ನೀಡಲು ಇಶಿತಾ ಆಚಾರ್ ಹೊಲಿಗೆ ಕಲಿತು ಮನೆಯಲ್ಲಿ ಮಾಸ್ಕ್ ಗಳನ್ನು ಸಿದ್ಧಪಡಿಸಿದ್ದಳು.
ಮಾಸ್ಕ್ ಬ್ಯಾಂಕ್ ಮಾಸ್ಕ್ ಗಳು ಹೆಚ್ಚಾಗುತ್ತಿದ್ದಂತೆ ಇಶಿತ, ಯೋಧರಿಗಾಗಿ ರಕ್ಷಣಾ ಸಚಿವರ ವಿಳಾಸ ಪಡೆದು ಕೊರಿಯರ್ ಮಾಡಿದ್ದಳು.
ಒಂದೂವರೆ ತಿಂಗಳ ಬಳಿಕ ರಾಜನಾಥ್ ಸಿಂಗ್ ಅವರಿಂದ ಅಭಿನಂದನಾ ಪತ್ರ ಬಂದಿದೆ ಎಂದು ಇಶಿತಾ ಅವರ ತಾಯಿ ನಂದಿತಾ ಆಚಾರ್ ಮಾಹಿತಿ ನೀಡಿದರು.
Kshetra Samachara
25/09/2020 04:07 pm