ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಉಡುಪಿ ಕೈಮಗ್ಗ ಸೀರೆ ನೀಡಿದ ಪೇಜಾವರ ಶ್ರೀ

ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದರು.‌ ಈ ವೇಳೆ ಉಡುಪಿ ನೇಕಾರ ಸಮಾಜದವರು ದೀಪಾವಳಿ ಉಡುಗೊರೆಯಾಗಿ ಕೊಡಮಾಡಿದ ಎರಡು ಕೈಮಗ್ಗದ ಸೀರೆಗಳನ್ನು ಹಾಗೂ ಬೆಳ್ಳಿ ಬಟ್ಟಲಲ್ಲಿ ಕುಂಕುಮ, ಉಡುಪಿ ಕೃಷ್ಣನ ಪ್ರಸಾದ ಫಲ, ಮಂತ್ರಾಕ್ಷತೆ ನೀಡಿ ರಾಷ್ಟ್ರದ ಒಳಿತಿಗಾಗಿ ಅತಿ ಸಮರ್ಥವಾಗಿ ಕಾರ್ಯ ನಿರ್ವಹಿಸುವ ಶಕ್ತಿ ದೇವರು ಅನುಗ್ರಹಿಸಲಿ ಎಂದು ಶ್ರೀಗಳು ಹರಸಿದರು.

Edited By : Vijay Kumar
Kshetra Samachara

Kshetra Samachara

10/11/2020 08:29 pm

Cinque Terre

4.72 K

Cinque Terre

0

ಸಂಬಂಧಿತ ಸುದ್ದಿ