ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ : ದಾರಿದೀಪ ದುರಸ್ತಿಗೆ ಅಂಬೇಡ್ಕರ್ ಯುವಸೇನೆ ಪಂಜಿನ ಮೆರವಣಿಗೆ

ಮಲ್ಪೆ : ಇಲ್ಲಿನ ಸಿಟಿಜನ್ ಸರ್ಕಲ್‌ನಿಂದ ತೊಟ್ಟಂ ಚರ್ಚ್‌ವರೆಗೆ ದಾರಿದೀಪ ದುರಸ್ತಿಗಾಗಿ ಅಂಬೇಡ್ಕರ್ ಯುವಸೇನೆಯ ಮಲ್ಪೆ ನಗರ ಶಾಖೆ ವತಿಯಿಂದ ಪಂಜಿನ ಮೆರವಣಿಗೆ ನಡೆಯಿತು.

ಕಳೆದ ಒಂದು ವರ್ಷದಿಂದ ಮಲ್ಪೆಯ ಮೀನುಗಾರಿಕೆ ಬಂದರಿನಿಂದ ಪ್ರವಾಸಿ ತಾಣ ಮಲ್ಪೆ ಬೀಚ್ ಹಾಗೂ ತೊಟ್ಟಂ ಚಚ್‌ವರೆಗೆ ದಾರಿದೀಪ ಇಲ್ಲದೆ ಜನ ಪರದಾಡುವಂತಾಗಿದೆ.

ಇಲ್ಲಿನ ದಲಿತ ಕಾಲೊನಿಯ ದಾರಿದೀಪದ ಅವ್ಯವಸ್ಥೆಯನ್ನೂ ಖಂಡಿಸಿ ಪ್ರತಿಭಟಿಸಲಾಯಿತು.

ಈ ಬಗ್ಗೆ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಸೌಕರ್ಯ ಭರಿತ, ಸ್ವಚ್ಛ, ಸುಂದರ ಉಡುಪಿ ನಿರ್ಮಾಣ ಧ್ಯೇಯದೊಂದಿಗೆ ಆಡಳಿತಕ್ಕೆ ಬಂದ ಜನಪ್ರತಿನಿಧಿಗಳು ಫ್ಯಾಶನ್ ಶೋ ನಡೆಸುವುದನ್ನು ಬಿಟ್ಟು ವಾರ್ಡಿನ ಕೆಲಸ ಮಾಡಲಿ.

ದಕ್ಷತೆ, ಶಿಸ್ತು, ಅಳವಡಿಸಿ ಭ್ರಷ್ಟಾಚಾರ ರಹಿತ ಜನಪರ ಕೆಲಸ ಮಾಡಲು ಅಸಾಧ್ಯವಾದಲ್ಲಿ ಕುರ್ಚಿ ಬಿಟ್ಟು ತೊಲಗಲಿ ಎಂದರು.

ದಲಿತ ನಾಯಕ ಗಣೇಶ್ ನೆರ್ಗ ಮಾತನಾಡಿ, ಇದು ಕೇವಲ ಸಾಂಕೇತಿಕ ಪ್ರತಿಭಟನೆ. ತಕ್ಷಣ ಈ ದಾರಿದೀಪದ ಸಮಸ್ಯೆ ಸರಿಪಡಿಸದಿದ್ದರೆ ಅಂಬೇಡ್ಕರ್ ಯುವಸೇನೆ ಉಗ್ರ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿದರು.

Edited By : Nirmala Aralikatti
Kshetra Samachara

Kshetra Samachara

09/11/2020 04:42 pm

Cinque Terre

4.49 K

Cinque Terre

1

ಸಂಬಂಧಿತ ಸುದ್ದಿ