ಉಡುಪಿ: ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ದೇವಾಲಯಗಳಲ್ಲಿ ಅನ್ನಸಂತರ್ಪಣೆಗೆ ಅವಕಾಶ ನೀಡಿದ್ದಾರೆ. ಆದರೆ ಈ ಹಿಂದೆ ಪ್ರತಿದಿನ ಅನ್ನದಾನ ಮಾಡುತ್ತಿದ್ದ ದೇವಾಲಯಗಳಲ್ಲಿ ಮಾತ್ರವೇ ಅನ್ನಸಂತರ್ಪಣೆ ಮುಂದುವರಿಸಬಹುದೇ ಹೊರತು ಹೊಸತಾಗಿ ಆರಂಭಿಸಬಾರದು ಎಂದು ಸೂಚನೆ ನೀಡಿದ್ದಾರೆ.
ಉಪ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರವೇಶ ದ್ವಾರದ ಬಳಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಭಕ್ತರ ಸಂಖ್ಯೆ ಹೆಚ್ಚಳವಾದರೆ ಪೊಲೀಸರ ನೆರವು ಪಡೆದುಕೊಳ್ಳಬೇಕು. ಆದರೆ ದೇವಾಲಯದ ವಾರ್ಷಿಕ ಉತ್ಸವಗಳು, ಬ್ರಹ್ಮಕಲಶೋತ್ಸವ, ಪವಿತ್ರೋತ್ಸವ ಮತ್ತು ಇತರ ವಿಶೇಷ ಸಂದರ್ಭಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸಂಪ್ರದಾಯಗಳಲ್ಲಿ ಅವುಗಳನ್ನು ಮುಂದೂಡಲು ಅವಕಾಶವಿಲ್ಲದಿದ್ದರೆ, ಇವುಗಳನ್ನು ಸಾಂಕೇತಿಕವಾಗಿ ಆಚರಿಸಬೇಕು ಎಂದು ದೇವಾಲಯದ ತಂತ್ರಿ, ಪುರೋಹಿತರು ಮತ್ತು ಸಿಬ್ಬಂದಿಗೆ ಸಲಹೆ ನೀಡಿದರು.
Kshetra Samachara
08/10/2020 06:15 pm