ಮೂಡಬಿದ್ರೆ: ಮೂಡಬಿದ್ರೆ ಸಮೀಪದ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಆದರ್ಶನಗರ ಮುರಗೋಳಿ, ಮೂಡುಮಾರ್ನಾಡು ಮಡ್ಡೇಲು ಹಾಗೂ ಅಚ್ಚರಕಟ್ಟೆ ಎಂಬಲ್ಲಿ ಸುಮಾರು1 ಕೋಟಿ 62 ಲಕ್ಷ ರೂ ಅನುದಾನದಲ್ಲಿ ಪ್ರತಿ ಮನೆ ಮನೆಗೂ ನೀರಿನ ಸಂಪರ್ಕ ಒದಗಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು
ಈ ಸಂದರ್ಭದಲ್ಲಿ ಗ್ರಾ. ಪಂ.ಅಧ್ಯಕ್ಷ ಕಲ್ಯಾಣಿ, ಮಾಜಿ ಅಧ್ಯಕ್ಷರಾದ ದಯಾನಂದ ಪೈ, ಶ್ರೀನಾಥ್ ಸುವರ್ಣ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್, ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
31/07/2021 03:28 pm