ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಹಳ್ಳಿ ಕ್ರೀಡಾ ಸೊಬಗು ಅನಾವರಣ; ಕೆಸರುಗದ್ದೆಯಲ್ಲಿ ಗಮ್ಮತ್ತಿನ ವಾತಾವರಣ

ಬಂಟ್ವಾಳ: ದೈನಂದಿನ ವೃತ್ತಿ- ಜಂಜಾಟಗಳಲ್ಲಿ ಬ್ಯುಸಿಯಾಗಿದ್ದ ಕೃಷಿಕರು, ಕಾರ್ಮಿಕರು, ಯುವಜನರು ಹೀಗೆ ಪರಿಶ್ರಮಿಗಳು ಒಂದು ದಿನದ ಬ್ರೇಕ್‌ ಪಡೆದು ಗದ್ದೆಯ ಕೆಸರು ಮಣ್ಣಿನಲ್ಲಿ ಎಳೆಯರೊಂದಿಗೆ ಆಟವಾಡಿ ರಿಲ್ಯಾಕ್ಸ್‌ ಮೂಡ್‌ಗೆ ಇಳಿದಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದವು ಆಶ್ರಯದಲ್ಲಿ ಐಸಿವೈಎಂ ಹಾಗೂ ಕೆಥೋಲಿಕ್‌ ಸಭಾ ಫಟಕ ಪೆರುವಾಯಿ ಸಹಯೋಗದೊಂದಿಗೆ "ಗದ್ಯಾಂತ್ ಗಮ್ಮತ್" ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕು ಎಂದು ಹೇಳಿದರು. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಎಲ್ಲರೂ ಇಡೀ ದಿನ ಕೆಸರಿನಲ್ಲಿ ಆಟವಾಡಿ ಮಿಂದೆದ್ದರು.

ಮಡಕೆ ಒಡೆಯುವುದು ಸೇರಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶ್ರೀ ಕ್ಷೇತ್ರ ಕುಕ್ಕಾಜೆಯ ಶ್ರೀಕೃಷ್ಣ ಗೂರೂಜಿ, ವಂದನೀಯ ವಿಶಾಲ್‌ ಮೋನಿಸ್‌ ಮಾತನಾಡಿದರು. ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಬ್ರಿಜೇಶ್‌ ಚೌಟ, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯ್ಸ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

07/09/2022 09:51 am

Cinque Terre

7.71 K

Cinque Terre

0

ಸಂಬಂಧಿತ ಸುದ್ದಿ