ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: 'ಮೇಜರ್ ಧ್ಯಾನ್ ಚಂದ್ ಕ್ರೀಡಾ ಸಾಧನೆ ಅವಿಸ್ಮರಣೀಯ'

ಮುಲ್ಕಿ:ಶ್ರೀ ಸುಬ್ರಹ್ಮಣ್ಯ ಹಳೆಯಂಗಡಿ ಸಮೀಪದ ತೋಕೂರು ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ಆಶ್ರಯದಲ್ಲಿ ಕ್ರೀಡಾ ಇತಿಹಾಸದಲ್ಲಿ ಅವಿಸ್ಮರಣೀಯರಾದ ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಯ ಸಮಾರೋಪ ಸಮಾರಂಭ ತೋಕೂರು ಹಿಂದುಸ್ಥಾನಿ ಶಾಲಾ ಮೈದಾನದಲ್ಲಿ ಜರುಗಿತು.

ಸಮಾರೋಪ ಸಮಾರಂಭದಲ್ಲಿ ಮಂಗಳೂರು ಎಪಿಎಂಸಿ ಮಾಜಿ ಅಧ್ಯಕ್ಷರಾದ ಪ್ರಮೋದ್ ಕುಮಾರ್ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿ ಮೇಜರ್ ಧ್ಯಾನ್ ಚಂದ್ ಅವರ ಕ್ರೀಡಾ ಸಾಧನೆ ಮತ್ತು ದೇಶಕ್ಕೆ ಅವರ ಕೊಡುಗೆಯ ಮಹತ್ವವನ್ನು ವಿವರಿಸಿದ್ದರು

ವೇದಿಕೆಯಲ್ಲಿ ಮಾಜೀ ತಾ ಪಂ ಸದಸ್ಯ ಮನ್ಸೂರ್, ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಾಕ್ಷ ಮೋಹನ್ ದಾಸ್,ಅಧ್ಯಕ್ಷ ಸಂತೋಷ್ ದೇವಾಡಿಗ,ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು, ಸದಸ್ಯೆಯರು ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಅಂತಿಮ ಪಂದ್ಯದಲ್ಲಿ ಸಾಗರ್ ಸಾಗ್ ಪ್ರಥಮ ಹಾಗೂ ಯುವಕ ಮಂಡಲ್ ಸಸಿಹಿತ್ಲು ದ್ವಿತೀಯ ಸ್ಥಾನ ಪಡೆದು ವಿಜೇತರಾದರು.

ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಸಾಗರ್ ಸಾಗ್ ನ ರಜೀಮ್, ಮತ್ತು ಉತ್ತಮ ಬೌಲರ್ ಪ್ರಶಸ್ತಿ ರಬೀಜ್ ,ಹಾಗೂ ಉತ್ತಮ ದಾಂಡಿಗ ಪ್ರಶಸ್ತಿ ಯುವಕ ಮಂಡಲ ಸಸಿಹಿತ್ಲು ತಂಡದ ಯಶ್ವಿತ್ ಪಡೆದುಕೊಂಡರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ಜಗದೀಶ್ ಕುಲಾಲ್ ಸ್ವಾಗತಿಸಿದರು.

Edited By : PublicNext Desk
Kshetra Samachara

Kshetra Samachara

02/09/2022 09:57 am

Cinque Terre

1.04 K

Cinque Terre

0

ಸಂಬಂಧಿತ ಸುದ್ದಿ