ಶಿರ್ವ: ಉಡುಪಿ ಜಿಲ್ಲೆಯ ರಜತ ಮಹೋತ್ಸವ ಪ್ರಯುಕ್ತ ಜಿಲ್ಲಾಡಳಿತ ಸಹಯೋಗದಲ್ಲಿ ಸೇನೆಯತ್ತ ಯುವ ಸಮುದಾಯವನ್ನು ಸೆಳೆಯುವ ಉದ್ದೇಶದಿಂದ ಹಮ್ಮಿಕೊಂಡಿರುವ ಅಗ್ನಿಪಥ್ ದೌಡ್‌ಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ. ಇವತ್ತು ಬೆಳಿಗ್ಗೆ ಕಾರ್ಕಳದಲ್ಲಿ ದೌಡ್‌ಗೆ ಚಾಲನೆ ನೀಡಲಾಗಿತ್ತು. ಸುಮಾರು 75 ಕೀ.ಮೀ ಓಟ ಕಾರ್ಕಳದಿಂದ ನಿಟ್ಟೆ ಮೂಲಕ ಶಿರ್ವ ತಲುಪಿದೆ. ಸುರಿಯುವ ಮಳೆಯಲ್ಲೂ ಯುವ ಸಮುದಾಯ ದೌಡ್‌ಗೆ ಬೆಂಬಲ ಸೂಚಿಸಿದೆ.
ಇಲ್ಲಿನ ಸೈಂಟ್ ಲಾರೆನ್ಸ್ ಬಸಿಲಿಕಾ ಚರ್ಚ್ ಅತ್ತೂರು ಬಳಿ ಬಂದಾಗ ಚರ್ಚ್ ಧರ್ಮಗುರುಗುಳು, ಸ್ಥಳೀಯ ಜನಪ್ರತಿನಿಧಿಗಳು ಸ್ವಾಗತಿಸಿ ಶುಭ ಹಾರೈಸಿದರು.
ಬಳಿಕ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡವರಿಗೆ ಶುಭಹಾರೈಸಿ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಎನ್. ವಿನಯ್ ಹೆಗ್ಡೆ ಅವರೊಂದಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನೀಲ್ ಕುಮಾರ್ ಹಾಗೂ ಶಾಸಕ ರಘುಪತಿ ಭಟ್ ಅವರು "ಅಗ್ನಿಪಥ್ ದೌಡ್" ಮ್ಯಾರಥಾನ್ ಓಟಕ್ಕೆ ನಿಟ್ಟೆ ವಿಶ್ವವಿದ್ಯಾಲಯದಿಂದ ಚಾಲನೆ ನೀಡಿದರು. ಅಲ್ಲಿಂದ ಓಟವು ಶಿರ್ವ ತಲುಪಿದ್ದು ನಾಳೆ ಉಡುಪಿಯ ಅಜ್ಜರಕಾಡಿನಲ್ಲಿ ಸಮಾಪನಗೊಳ್ಳಲಿದೆ.
Kshetra Samachara
24/08/2022 06:53 pm