ಕುಂದಾಪುರ: ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಹೆಚ್,ಎಂ.ಎಂ ಆಂಗ್ಲಮಾಧ್ಯಮ ಶಾಲೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶ್ರವ್ಯಾ, ಪ್ರಾಪ್ತಿ ಮಡಪ್ಪಾಡಿ, ದಿಯಾ ಹಾಗೂ ಸಾನ್ವಿ ಪ್ರಥಮ ಸ್ಥಾನ ಪಡೆದರೆ, ಪ್ರೌಢ ಶಾಲಾ ವಿಭಾಗದಲ್ಲಿ ಕ್ಷಮಾ, ಸನಿತಾ, ಅಂಕಿತಾ ಹಾಗೂ ಭಾರ್ಗವಿ ಪ್ರಥಮ ಸ್ಥಾನ ಪಡೆದು ಶಾಲೆಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಸಂದರ್ಭ ಶಾಲೆಯ ದೈಹಿಕ ಶಿಕ್ಷಕರಾದ ನಾಗೇಂದ್ರ ಪ್ರಭು,ವೀರೇಂದ್ರ ಹಾಗೂ ರಾಜೇಂದ್ರ ಶೆಟ್ಟಿ ತರಬೇತಿ ನೀಡಿದ್ದಾರೆ. ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಶುಭ ಹಾರೈಸಿದ್ದಾರೆ.
Kshetra Samachara
23/08/2022 07:50 pm