ಮುಲ್ಕಿ: ಕರ್ನಾಟಕ ಸರಕಾರ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ ಕ ಜಿಲ್ಲೆ ಆಶ್ರಯದಲ್ಲಿ ಬೆಳ್ತಂಗಡಿಯ ಹಳೆಕೋಟೆ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ 2022 23 ನೇ ಸಾಲಿನ ಆಟೋಟ ಸ್ಪರ್ಧೆಯಲ್ಲಿ 17ರ ವಯೋಮಿತಿಯ 48-52 ಕೆ.ಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಮುಲ್ಕಿಯ ಕೆಂಚನಕೆರೆ ಮಾಧವ ಕಾಮತ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ.
ಕೆಂಚನಕೆರೆ ಮಾಧವ ಕಾಮತ್ ರವರು ಈ ಹಿಂದೆ ಮುಲ್ಕಿಯ ಕಾರ್ನಾಡ್ ಹಾಗೂ ಉಡುಪಿಯಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದರು.ಮುಲ್ಕಿಯ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠದ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಕೆಂಚನಕೆರೆ ರಘುನಾಥ ಕಾಮತ್ ಸುಧಾ ಕಾಮತ್ ಪುತ್ರ.
Kshetra Samachara
11/08/2022 07:05 am