ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಂಬಳದ 'ಉಸೇನ್ ಬೋಲ್ಟ್' ವಿರುದ್ಧ ಸುಳ್ಳು ಆಪಾದನೆ: ಗುಣಪಾಲ ಕಡಂಬ ಸ್ಪಷ್ಟನೆ

ಮಂಗಳೂರು: ಕಂಬಳಕ್ಕೆ ಕಳಂಕ ತರಲು, ಶ್ರೀನಿವಾಸ ಗೌಡರ ತೇಜೋವಧೆ ಮಾಡಲು ಹಾಗೂ ಕಂಬಳ ಅಕಾಡೆಮಿಯ ಚಟುವಟಿಕೆಗಳನ್ನು ಸಹಿಸದೆ ಸುಳ್ಳು ಆರೋಪ ಮಾಡಿ ಪೊಲೀಸ್ ದೂರು ದಾಖಲಿಸಿದ್ದಾರೆಂದು ಜಿಲ್ಲಾ ಕಂಬಳ ಸಮಿತಿಯ ಸ್ಥಾಪಕ ಕಾರ್ಯದರ್ಶಿ ಗುಣಪಾಲ ಕಡಂಬ ಹೇಳಿದರು.

ಶ್ರೀನಿವಾಸ ಗೌಡರು ಕಂಬಳ ಓಟದಲ್ಲಿ ಉಸೇನ್ ಬೋಲ್ಟ್ ದಾಖಲೆ ಮುರಿದಿರುವುದು ಸುಳ್ಳು ಎಂದು ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿ ಎಂಬುವರು ಶ್ರೀನಿವಾಸ ಗೌಡ, ಗುಣಪಾಲ ಕಡಂಬ ಹಾಗೂ ಸ್ಕೈವೀವ್ ರತ್ನಾಕರ ಎಂಬುವರ ಮೇಲೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ನಗರದ ಪ್ರೆಸ್ ಕ್ಲಬ್ ನಲ್ಲಿ ಸ್ಪಷ್ಟನೆ ನೀಡಿ ಮಾತನಾಡಿದ ಗುಣಪಾಲ ಕಡಂಬರು, 2020ರ ಐಕಳ ಕಂಬಳೋತ್ಸವದಲ್ಲಿ ಶ್ರೀನಿವಾಸ ಗೌಡ 9.55 ಸೆಕೆಂಡ್ ನಲ್ಲಿ ಕೋಣಗಳನ್ನು ಓಡಿಸಿ ದಾಖಲೆ ಬರೆದಿದ್ದರು. ಆದರೆ ಇದನ್ನು ನಾವು ಯಾರೂ ಮಾಧ್ಯಮಕ್ಕೆ ಉಸೇನ್ ಬೋಲ್ಟ್ ಗೆ ಹೋಲಿಸಿ ಮಾಹಿತಿ ನೀಡಿಲ್ಲ‌. ಈ ಬಗ್ಗೆ ಹೇಳಿಕೆ ನೀಡಿದವರು ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿ ಮತ್ತು ವಿಜಯ ಕುಮಾರ್ ಕಂಗಿನಮನೆಯವರು. ಆದರೆ ಇದೀಗ ಕೇವಲ ಕಂಬಳ ಅಕಾಡೆಮಿಗೆ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಈ ರೀತಿಯ ಸುಳ್ಳು ಆಪಾದನೆ‌ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಶ್ರೀನಿವಾಸ ಗೌಡ ಅವರು ಕಂಬಳ ಸಂರಕ್ಷಣೆ, ನಿರ್ವಹಣೆ ಹಾಗೂ ತರಬೇತಿ ಅಕಾಡೆಮಿಯಿಂದ ತರಬೇತಿ ಪಡೆದವರು. ಆದ್ದರಿಂದ ಅವರಿಗೆ ಹೆಸರು ಬಂದರೆ ಅಕಾಡೆಮಿಯ ಹೆಸರು ಬರುತ್ತದೆ. ಸಾಧನೆ ವಿಚಾರ ಬರುವಾಗ ಗುಣಪಾಲ ಕಡಂಬರ ಹೆಸರು ಬರುತ್ತದೆ ಎಂಬ ಸಿಟ್ಟಿನಿಂದ ಸುಮ್ಮನೆ ಆರೋಪ ಮಾಡಲಾಗುತ್ತಿದೆ. ದುರಾದೃಷ್ಟವಶಾತ್ ಕೆಲ ಮಾಧ್ಯಮಗಳಲ್ಲಿ ನಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಸುದ್ದಿ ಬಿತ್ತರವಾಗಿದೆ. ಆದರೆ ದೂರು ಮಾತ್ರ ದಾಖಲಾಗಿದೆಯೇ ವಿನಃ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. ನಾವೇನು ರಾಬರಿ, ಫೋರ್ಜರಿ ಮಾಡಿಲ್ಲ. ನಾವು ಯಾರಿಗೂ ಮೋಸ ಮಾಡಿಲ್ಲ ಎಂದು ಹೇಳಿದರು.

Edited By : Shivu K
Kshetra Samachara

Kshetra Samachara

22/07/2022 04:51 pm

Cinque Terre

7.59 K

Cinque Terre

1

ಸಂಬಂಧಿತ ಸುದ್ದಿ