ಮಂಗಳೂರು: ಕೊಟ್ಟಾರಿ ಯುವ ವೇದಿಕೆ ಆಶ್ರಯದಲ್ಲಿ ನಡೆಯುತ್ತಿರುವ 'ಕೊಟ್ಟಾರಿ ಪ್ರೀಮಿಯರ್ ಲೀಗ್ - 2022' ಎಂಬ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿ ಮಂಗಳೂರು ನಗರದ ಉರ್ವ ಮೈದಾನದಲ್ಲಿ ನಡೆಯುತ್ತಿದೆ. ಹತ್ತು ತಂಡಗಳನ್ನು ಒಳಗೊಂಡ ಕೆಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಕೊಟ್ಟಾರಿ ವೀರಸ್ ಹಾಗೂ ಕೊಟ್ಟಾರಿ ಚಾಲೆಂಜರ್ಸ್ ನಡುವೆ ನಡೆದ ಪಂದ್ಯದಲ್ಲಿ ಕೊಟ್ಟಾರಿ ಚಾಲೆಂಜರ್ಸ್ ತಂಡದ ಅಮೋಘ ವಿಜಯ ಸಾಧಿಸುವ ಮೂಲಕ ದ್ವಿತೀಯ ಪಂದ್ಯಾಟವನ್ನು ಗೆದ್ದು ಕೊಂಡಿದೆ.
31 ರನ್ ಗಳು ಗುರಿ ಬೆನ್ನತ್ತಿದ್ದ ಚಾಲೆಂಜರ್ಸ್ ತಂಡ 3 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿದೆ. ಪಂದ್ಯಾಟದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಕಿಶೋರ್ ಕೊಟ್ಟಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
Kshetra Samachara
01/05/2022 06:38 pm