ಮಂಗಳೂರು: ನಗರದ ಪುರಭವನದಲ್ಲಿ ನಡೆಯುತ್ತಿರುವ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಲ್ಲಿ ಮಂಗಳೂರಿನ ಪ್ರದೀಪ್ ಆಚಾರ್ಯ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಂಗಳೂರಿನ ಬಾಲಾಂಜನೇಯ ವ್ಯಾಯಾಮ ಶಾಲೆಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಏ.27 ರಿಂದ 30 ರ ತನಕ ಈ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಡೆಯುತ್ತಿದೆ.
ಪ್ರದೀಪ್ ಆಚಾರ್ಯ ಬೆಂಚ್ ಪ್ರೆಸ್ ವಿಭಾಗದಲ್ಲಿ 83 ಕೆಜಿ ವಿಭಾಗದಲ್ಲಿ 795 ಕೆಜಿ ಭಾರವನ್ನು ಎತ್ತಿದರು. ಇದರಲ್ಲಿ ಸ್ಕ್ವಾಟ್ 315 ಕೆಜಿ, ಬೆಂಚ್ ಪ್ರೆಸ್ 220 ಕೆಜಿ, ಡೆಡ್ ಲಿಫ್ಟ್ 260 ಕೆಜಿ ಒಳಗೊಂಡಿದೆ. ಪ್ರದೀಪ್ ಆಚಾರ್ಯ ಬಾಲಾಂಜನೇಯ ವ್ಯಾಯಾಮ ಶಾಲೆಯ ಸದಸ್ಯ.
Kshetra Samachara
30/04/2022 04:29 pm