ಕಾವೂರು: ಮಂಗಳೂರು ನಗರದ ಹೊರವಲಯದ ಮುಲ್ಲಕಾಡುವಿನಲ್ಲಿ ನಡೆದ ಅಭಿಮನ್ಯು ಕ್ರೀಡೋತ್ಸವದ ಅಂಗವಾಗಿ ಆಯೋಜಿಸಲಾದ ಅಭಿಮನ್ಯು ಪ್ರೀಮಿಯರ್ ಲೀಗ್ 2022 ಅನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಲ್ಲಕಾಡು ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಅಭಿಮನ್ಯು ಪ್ರೀಮಿಯರ್ ಲೀಗ್ 2022 ಉದ್ಘಾಟನಾ ಪಂದ್ಯದಲ್ಲಿ ಶಾಸಕರು ಒಂದಿಷ್ಟು ಹೊತ್ತು ಬ್ಯಾಟಿಂಗ್ ಮಾಡುವ ಮೂಲಕ ನೆರೆದ ಕ್ರೀಡಾಪ್ರೇಮಿಗಳನ್ನು ರಂಜಿಸಿ ಮಾತನಾಡಿ ಕ್ರೀಡೆಗೆ ಯುವಕರ ಪ್ರೋತ್ಸಾಹ ಶ್ಲಾಘನೀಯ ಎಂದರು.
ಕ್ರೀಡಾಕೂಟದಲ್ಲಿ ಸಂಘಟಕರು, ಪಾಲಿಕೆಯ ಸದಸ್ಯರು, ಕ್ರೀಡಾಪಟುಗಳು, ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
23/04/2022 09:08 pm