ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ
ತೋಕೂರು ದಿ!ಬೂಬ ದೇವಾಡಿಗರ ಸ್ಮರಣಾರ್ಥ32ನೇ ವರ್ಷದ ಆಹ್ವಾನಿತ ತಂಡಗಳ ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಟ ತೋಕೂರು ಸರಕಾರಿ ಹಿರಿಯ ಪ್ರಾಥಮಿಕ ಹಿಂದುಸ್ತಾನಿ ಶಾಲೆಯ ಮೈದಾನದಲ್ಲಿ ಜರುಗಿತು.
ಅಂತಿಮ ರೋಮಾಂಚಕಾರಿ ಹಣಾಹಣಿಯಲ್ಲಿ ಆಂಜನೇಯ ಸಸಿಹಿತ್ಲು ತಂಡ ಹಳೆಯಂಗಡಿಯ ಇಂದಿರಾನಗರ ಕೊಪ್ಪಲ ತಂಡವನ್ನು ಸೋಲಿಸಿ ಪ್ರಶಸ್ತಿ ಹಾಗೂ ನಗದು ಗಳಿಸಿತು. ಅಂತಿಮ ಪಂದ್ಯದ ಸರಣಿ ಶ್ರೇಷ್ಠರಾಗಿ ಇಂದಿರಾನಗರ ಕೊಪ್ಪಲ ತಂಡದ ಕಲಂದರ್, ಪಂದ್ಯಶ್ರೇಷ್ಠ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ ನಾಗಿ ಆಂಜನೇಯ ಸಸಿಹಿತ್ಲು ತಂಡದ ಸನತ್, ರಾಕೇಶ್, ಜೀವನ್ ಬಹುಮಾನ ಗಳಿಸಿದರು.
ಸಮಾರೋಪದ ಅಧ್ಯಕ್ಷತೆ ವಹಿಸಿ ಮುಂಬೈ ಬಾಂದ್ರ ಧರ್ಮಶಾಸ್ತ ಭಕ್ತವೃಂದದ ಅಧ್ಯಕ್ಷ ರಾಮಣ್ಣ ದೇವಾಡಿಗ ಮಾತನಾಡಿ ಕ್ರೀಡೆಯನ್ನು ಸಂಘಟಿಸುವ ಮೂಲಕ ಯುವ ಸಮುದಾಯವು ಸದೃಢವಾಗಿ ಸಮಾಜದಲ್ಲಿ ತೊಡಗಿಕೊಳ್ಳಲು ಸಾಧ್ಯವಿದೆ ಎಂದರು.
ವೇದಿಕೆಯಲ್ಲಿ ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಮಂಜುಳಾ,ಮುಲ್ಕಿ ಬಂಟರ ಸಂಘ(ರಿ)ದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ,ಸಮಾಜ ಸೇವಕಿ,ದೇವಾಡಿಗ ಅಕ್ಷಯ ಕಿರಣ ಫೌಂಡೇಶನ್ ಸೇವಾದಾರರು ಮುಂಬೈ ನ ಉಮಾವತಿ ಗುಜರನ್,ಮಾಜಿ ತಾಪಂ ಸದಸ್ಯ ಜೀವನ್ ಪ್ರಕಾಶ್,ಕ್ಲಬ್ ನ ಗೌರವಾಧ್ಯಕ್ಷ ಮೋಹನ್ ದಾಸ್,ಮಹಿಳಾ ಕಾರ್ಯಧ್ಯಕ್ಷೆ ಶೋಭಾ.ವಿ.ಅಂಚನ್ ಉಪಸ್ಥಿತರಿದ್ದರು.ಕ್ಲಬ್ ನ ಅಧ್ಯಕ್ಷ ಸಂತೋಷ್ ದೇವಾಡಿಗ ಸ್ವಾಗತಿಸಿದರು.ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ವಂದಿಸಿದರು.
Kshetra Samachara
20/04/2022 06:56 pm