ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರಗದ್ದೆಯಲ್ಲಿ ನಡೆಯುವ ಕೋಟಿ-ಚೆನ್ನಯ್ಯ ಜೋಡುಕೆರೆ ಕಂಬಳ ಮಾರ್ಚ್ 19 ಮತ್ತು 20 ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ಮಾಹಿತಿ ನೀಡಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಿ ದಿ. ಮುತ್ತಪ್ಪ ರೈ ನೇತೃತ್ವದಲ್ಲಿ ಆರಂಭಗೊಂಡ ಪುತ್ತೂರು ಕಂಬಳ ಈ ಬಾರಿ 29 ನೇ ವರ್ಷಾಚರಣೆಯಲ್ಲಿದ್ದು, ಕಂಬಳದಲ್ಲಿ 200 ಕ್ಕೂ ಮಿಕ್ಕಿದ ಕೋಣಗಳು ಭಾಗವಹಿಸಲಿದೆ ಎಂದರು.
ಕಂಬಳದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ, ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವು ಚಿತ್ರನಟ-ನಟಿಯರು ಭಾಗವಹಿಸಲಿದ್ದಾರೆ. ಕಂಬಳ ಸಮಿತಿ ವತಿಯಿಂದ ಹಲವರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದ್ದು, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ ಮತ್ತು ಕಂಬಳ ಕ್ಷೇತ್ರದ ಹಿರಿಯ ಕೇಶವ ಭಂಡಾರಿಯವರು ಸನ್ಮಾನ ಸ್ವೀಕರಿಸಲಿದ್ದಾರೆ.
Kshetra Samachara
14/03/2022 01:46 pm