ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಷ್ಟ್ರಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್; ಮಂಗಳೂರಿನ ಆರ್ನಾ ಗೆ 2 ಪದಕ

ಮಂಗಳೂರು: ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ, ದೆಹಲಿಯಲ್ಲಿ ಆಯೋಜಿಸಿದ್ದ 59ನೇ ರಾಷ್ಟಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಮಂಗಳೂರಿನ ಆರ್ನಾ ರಾಜೇಶ್ ಅತಿ ಕಿರಿಯ ವಯಸ್ಸಿನಲ್ಲೇ ಎರಡು ಪದಕಗಳನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

5ರಿಂದ 7 ವರ್ಷದೊಳಗಿನ ರಾಷ್ಟ್ರಮಟ್ಟದ ಇನ್ ಲೈನ್ ಸ್ಕೇಟಿಂಗ್ ನ ಬಾಲಕಿಯರ ವಿಭಾಗದಲ್ಲಿ ಆರ್ನಾ, ತ್ರೀಲ್ಯಾಪ್ ರಿಂಕ್ ರೇಸ್ ನಲ್ಲಿ ಬೆಳ್ಳಿ ಪದಕ‌ ಹಾಗೂ ಟುಲ್ಯಾಪ್ ರಿಂಕ್ ರೇಸ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ‌.

ಆರ್ನಾ ರಾಜೇಶ್ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನ 1ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕದ್ರಿ ಹಿಲ್ಸ್ ನಿವಾಸಿ ಡಾ.ರಾಜೇಶ್ ಹುಕ್ಕೇರಿ‌ ಹಾಗೂ ಡಾ.ಅನಿತಾ ದಂಪತಿ ಪುತ್ರಿ. ಕೋಚ್ ಪ್ರತೀಕ್ ರಾಜ್ ಅವರಿಂದ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Edited By : Manjunath H D
PublicNext

PublicNext

02/01/2022 10:46 pm

Cinque Terre

62.7 K

Cinque Terre

6

ಸಂಬಂಧಿತ ಸುದ್ದಿ