ಉಡುಪಿ: ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್, ಲಯನ್ ಮಾರ್ಷಿಯಲ್ ಆರ್ಟ್ಸ್ ಅಸೋಸಿಯೇಷನ್ , ಮುಂತಾದ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಭಾನುವಾರ ತುಮಕೂರಿನಲ್ಲಿ ನಡೆದ ಐದನೆಯ ರಾಷ್ಟ್ರೀಯ ಸಬ್ ಜೂನಿಯರ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕುಮಾರಿ ಅನವಿ ಪಿ ಶೆಟ್ಟಿ ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಶಿಪ್ ಟ್ರೋಫಿಯನ್ನು ಮುಡಿಗೇರಿಸಿರುತ್ತಾರೆ.
ಇವರು ಬ್ರಹ್ಮಾವರ ಜಿ ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ ಮತ್ತು ಉಡುಪಿ ಸಂತೆಕಟ್ಟೆಯ ಲಕ್ಷ್ಮಿ ಮತ್ತು ಪ್ರಕಾಶ್ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು ಪರ್ಕಳದ ಪ್ರವೀಣಾ ಕುಮಾರಿಯವರಿಂದ ತರಬೇತಿ ಪಡೆಯುತ್ತಿದ್ದಾರೆ.
Kshetra Samachara
06/12/2021 12:37 pm