ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಾಸ್ಟರ್ಸ್ ಈಜು; ಕರ್ನಾಟಕಕ್ಕೆ ಅಗ್ರಸ್ಥಾನ, ಪಾರ್ಥ ವಾರಣಾಸಿಗೆ 4 ಚಿನ್ನ

ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ರಾಷ್ಟ್ರಮಟ್ಟದ ಮಾಸ್ಟರ್ಸ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ 206 ಪದಕ ಜಯಿಸುವ ಮೂಲಕ ಅಗ್ರಸ್ಥಾನ ಗಳಿಸಿದೆ. ದೆಹಲಿ 175 ಪದಕ ಗಳಿಸಿ ಎರಡನೇ ಸ್ಥಾನ, ಮಹಾರಾಷ್ಟ್ರ 92 ಪದಕ ಗಳಿಸಿ ಮೂರನೇ ಸ್ಥಾನ ಪಡೆದಿದೆ‌.

ಕರ್ನಾಟಕದ ಪಾರ್ಥ ವಾರಣಾಸಿ ನಾಲ್ಕು ಚಿನ್ನದ ಪದಕ ಗಳಿಸಿ, ದಾಖಲೆ ಬರೆದಿದ್ದಾರೆ. ಪುರುಷರ ವಿಭಾಗದ 50 ಮೀ. ಬ್ಯಾಕ್ ಸ್ಟ್ರೋಕ್ ನಲ್ಲಿ (31.22 ಸೆ.) ಬಟರ್ ಫ್ಲೈ ನಲ್ಲಿ (27.34 ಸೆಕೆಂಡ್) ಫ್ರೀಸ್ಟೈಲ್ ಹಾಗೂ 100 ಮೀ. ಫ್ರೀಸ್ಟೈಲ್ ಸಿ ಗ್ರೂಪ್ ನಲ್ಲಿ ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ.

ಅದೇ ರೀತಿ ಮಂಗಳೂರಿನ 77 ವರ್ಷದ ಶಿರಿನ್ ಸಲ್ಡಾನ 50 ಮೀ. ಎಲ್ ಗ್ರೂಪ್ ನ ಬ್ಯಾಕ್ ಸ್ಟ್ರೋಕ್ ನಲ್ಲಿ ಬೆಳ್ಳಿ, 200 ಮೀ. ಫ್ರೀಸ್ಟೈಲ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

29/11/2021 04:46 pm

Cinque Terre

6.85 K

Cinque Terre

0

ಸಂಬಂಧಿತ ಸುದ್ದಿ