ಮೂಡುಬಿದಿರೆ: ಪುರಸಭಾ ವ್ತಾಪ್ತಿಯ ಒಂಟಿಕಟ್ಟೆಯ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ವೃದ್ಧೆಯ ಶವ ಭಾನುವಾರ ಪತ್ತೆಯಾಗಿದೆ.
ಒಂಟಿಕಟ್ಟೆಯ ನಿವಾಸಿ, ಮೂಲತಃ ತಮಿಳುನಾಡಿನ ಸರೋಜಿನಿ ಸಾವನ್ನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಸರೋಜಿನಿ ಅವರ ಇಬ್ಬರು ಪುತ್ರರು ಕೆಲವು ವರ್ಷಗಲ ಹಿಂದೆ ಸಾವನ್ನಪ್ಪಿದರು.ಇಬ್ಬರು ಪುತ್ರಿಯರು ಮದುವೆಯಾಗಿ ತಮಿಳುನಾಡಿನಲ್ಲಿ ನೆಲೆಸಿದ್ದರಿಂದ ಒಂಟಿಕಟ್ಟೆಯ ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ಹಿಂದೆ ಮೂಡುಬಿದಿರೆ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ನಡೆಸುತ್ತಿದ್ದ ಸರೋಜಿನಿ ಅವರು ಅನಾರೋಗ್ಯದಿಂದಾಗಿ ಕೆಲವು ಸಮಯಗಳಿಂದ ಮನೆಯಲ್ಲಿಯೇ ಇದ್ದು, ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು.
ಗುರುವಾರ ಅವರು ನೆರೆಮನೆಯವರೊಂದಿಗರ ಮಾತನಾಡಿದ್ದು, ಬಳಿಕ ಮನೆಯೊಳಗೆಯೇ ಇದ್ದರು ಎನ್ನಲಾಗಿದೆ. ಪಕ್ಕದ ಮನೆಯವರು ಫೋನ್ ಕರೆ ಮಾಡಿದ್ದರೂ ಸ್ವೀಕರಿಸಿರಲಿಲ್ಲ.ಭಾನುವಾರ ಬೆಳಿಗ್ಗೆಯಿಂದ ನೆರೆಮನೆಯವರಿಗೆ ವಾಸನೆ ಬರುತ್ತಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದಾಗ ಬಾಗಿಲು ತೆರೆದಾಗ ಬಾಗಿಲ ಬಳಿ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದೆ.ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
19/09/2021 07:28 pm