ಉಡುಪಿ: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್, ದಿನಾಂಕ 04-08-2021 ಮತ್ತು 05-08-2021ರಂದು ಆಯೋಜಿಸಿರುವ ಕರ್ನಾಟಕ ರಾಜ್ಯ ಮಟ್ಟದ ಹಿರಿಯರ ಮತ್ತು 23 ವರ್ಷ ವಯೋಮಿತಿಯ ಮಹಿಳೆಯರ ಹಾಗೂ ಪುರುಷರ ಕ್ರೀಡಾಕೂಟ ಹಾಗೂ ಉಡುಪಿಯ ನೇಶನ್ ಫಸ್ಟ್ ತಂಡ "ಫಿಟ್ ರಹೋ ಉಡುಪಿ" ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಿರುವ 75 ಕೀ.ಮೀ ಮ್ಯಾರಥಾನ್ ಓಟದ ಪೂರ್ವತಯಾರಿ ಬಗ್ಗೆ ಇಂದು ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಶಾಸಕ ಕೆ. ರಘುಪತಿ ಭಟ್ ಅವರು ಸಭೆ ನಡೆಸಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ (ರಿ) ಹಾಗೂ ನೇಶನ್ ಫಸ್ಟ್ ತಂಡದ ಪದಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
30/08/2021 05:37 pm