ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಕಂಬಳ' ಚಿತ್ರದಲ್ಲಿ ನಟಿಸಲು ನಿರಾಕರಣೆಯಿಂದ ನನ್ನ ಮೇಲೆ ದ್ವೇಷ ಭಾವನೆ; ಶ್ರೀನಿವಾಸ ಗೌಡ ಸ್ಪಷ್ಟನೆ

ನಾನು ಕುಡುಬಿ ಜಾತಿಯವನೆಂದು ನನ್ನನ್ನು ಕೀಳಾಗಿ ಕಾಣುತ್ತಿದ್ದ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರು ಅವರ 'ಕಂಬಳ' ಸಿನಿಮಾದಲ್ಲಿ ನಟಿಸಲು ಒಪ್ಪದಿರುವುದರಿಂದಲೇ ನನ್ನ ಮೇಲೆ ಸುಖಾಸುಮ್ಮನೇ ಆರೋಪ ಹೊರಿಸಿದ್ದಾರೆ‌ ಎಂದು ಖ್ಯಾತ ಕಂಬಳ ಓಟಗಾರ ಶ್ರೀನಿವಾಸ ಗೌಡ ತಮ್ಮ ಮೇಲಿನ ಆಪಾದನೆಗೆ ಸ್ಪಷ್ಟನೆ ನೀಡಿದ್ದಾರೆ‌.

ಕಂಬಳ ಓಟದ ಮೂಲಕ ವಿಶ್ವ ಖ್ಯಾತ ಅತ್ಲೀಟ್ ಉಸೇನ್ ಬೋಲ್ಟ್ ಜೊತೆಗೆ ತುಲನೆ ಮಾಡಿ ಶ್ರೀನಿವಾಸ ಗೌಡ ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ಕಂಬಳ ಸಮಿತಿ ಸದಸ್ಯ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರು ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ ಶ್ರೀನಿವಾಸ ಗೌಡರು, ನಾನು ಯಾವುದೇ ಸುಳ್ಳು ದಾಖಲೆ ಸೃಷ್ಟಿಸಿಲ್ಲ. ಯಾವುದೇ ತಪ್ಪು ಮಾಡಿಲ್ಲ. ಕಂಬಳದಲ್ಲಿ ಬಹಳ ಮಂದಿ ಓಟಗಾರರಿದ್ದಾರೆ. ಆದರೆ ನನ್ನೊಬ್ಬನನ್ನೇ ಟಾರ್ಗೆಟ್ ಮಾಡಿ ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅವರ ವ್ಯಕ್ತಿತ್ವ ಅಷ್ಟೊಂದು ಸರಿಯಿರದ ಹಿನ್ನೆಲೆಯಲ್ಲಿ ನಾನು ಅವರ ಸಿನಿಮಾದಲ್ಲಿ ನಟಿಸಲು ಒಪ್ಪಿರಲಿಲ್ಲ. ಇದೀಗ ನಾನು ‌ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ 'ಬಿರ್ದ್ ದ ಕಂಬಳ' ಸಿನಿಮಾದಲ್ಲಿ ನಟಿಸಲು ಒಪ್ಪಿದ್ದೇನೆ. ಈ ಕಾರಣದಿಂದಲೇ ಅವರು ನನ್ನ ಮೇಲೆ ಸುಳ್ಳು ಆಪಾದನೆ ಹೊರಿಸುತ್ತಿದ್ದಾರೆ.

ಅಲ್ಲದೆ, ನಾನು ಕಂಬಳ ಅಕಾಡೆಮಿಯ ಗುಣಪಾಲ ಕಡಂಬರ ಶಿಷ್ಯ ಎನ್ನುವ ಕಾರಣವೂ ಇದರ ಹಿಂದೆ ಅಡಗಿದೆ. ಆದ್ದರಿಂದ ನನ್ನ ಮೇಲೆ ಸುಳ್ಳು ಆಪಾದನೆ ಹೊರಿಸಿರುವ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದು ಶ್ರೀನಿವಾಸ ಗೌಡ ಹೇಳಿದರು.

Edited By :
Kshetra Samachara

Kshetra Samachara

23/07/2022 02:37 pm

Cinque Terre

8.62 K

Cinque Terre

0

ಸಂಬಂಧಿತ ಸುದ್ದಿ