ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂಬಳ ಓಟಗಾರ ಶ್ರೀನಿವಾಸ ಗೌಡ, ಪ್ರವೀಣ್ ಕೋಟ್ಯಾನ್ ಪಣಪಿಲಗೆ ಕ್ರೀಡಾ ರತ್ನ ಪ್ರಶಸ್ತಿ

ಮೂಡುಬಿದಿರೆ: ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಕಂಬಳ ಓಟಗಾರ ಶ್ರೀನಿವಾಸ ಗೌq ಅಶ್ವತ್ಥಪುರ, ಪ್ರವೀಣ್ ಕೋಟ್ಯಾನ್ ಪಣಪಿಲ ಆಯ್ಕೆಯಾಗಿದ್ದಾರೆ.

ಕಂಬಳ ಕ್ಷೇತ್ರದ ಮತ್ತೋರ್ವ ಓಟಗಾರ ಬೆಳ್ತಂಗಡಿ ತಾಲೂಕಿನ ವೇಣೂರು ಹೊಕ್ಕಾಡಿಗೋಳಿ ಹಕ್ಕೇರಿಯ ಸುರೇಶ್ ಎಂ.ಶೆಟ್ಟಿ ಕೂಡ ಆಯ್ಕೆಯಾಗಿದ್ದಾರೆ.

ಶ್ರೀನಿವಾಸ ಗೌಡ ಕಳೆದ ಸಾಲಿನ ಕಂಬಳ ಋತುವಿನಲ್ಲಿ ತಮ್ಮ ಕಂಬಳದ ಕರೆಯಲ್ಲಿ ದಾಖಲೆ ವೇಗದ ಓಟದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದರು. ಈ ಹಿಂದೆ ಬಾಹುಬಲಿ ತೆಲುಗು ಸಿನಿಮಾದಲ್ಲಿ ಗೂಳಿ ಓಡಿಸುವ ಸನ್ನಿವೇಶದಲ್ಲೂ ಕಾಣಿಸಿಕೊಂಡಿದ್ದರು.

Edited By : Nagaraj Tulugeri
Kshetra Samachara

Kshetra Samachara

28/10/2020 06:45 pm

Cinque Terre

8.4 K

Cinque Terre

4

ಸಂಬಂಧಿತ ಸುದ್ದಿ