ಮಂಗಳೂರು: ದಕ್ಷಿಣ ಕನ್ನಡ ಹಾಗೂ ಕೊಡಗು ಭಾಗಗಳಲ್ಲಿ ಜೂ.25 ರಂದು ಹಾಗೂ ಇಂದು ಬೆಳಗ್ಗೆ ಸೇರಿದಂತೆ ಎರಡು ಬಾರಿ ಭೂಮಿ ಕಂಪನಗೊಂಡು ಜನತೆ ಭೀತಿಗೊಳಗಾಗಿದ್ದಾರೆ. ಒಂದು ಬಾರಿ ಕಂಪಿಸಿದ ಭೂಮಿ ಎರಡು ದಿನಗಳ ನಂತರ ಮತ್ತೆ ಕಂಪಿಸಿರೋದು ಬಹುದೊಡ್ಡ ಭೂಕಂಪನದ ಮುನ್ಸೂಚನೆಯೇ ಎಂಬ ಜನರ ಭಯಕ್ಕೆ ಈ ಹಿರಿಯ ವಿಜ್ಞಾನಿ ಮಾತು ಕೊಂಚ ಸಮಾಧಾನ ಕೊಟ್ಟಿದೆ. ಅಷ್ಟಕ್ಕೂ ಈ ವಿಜ್ಞಾನಿ ಹೇಳಿದ್ದೇನು ಗೊತ್ತೇ?
ಹೌದು... ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ, ಹಿರಿಯ ವಿಜ್ಞಾನಿ ಡಾ.ಕೆ.ವಿ.ರಾವ್ ಅವರು ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿ, ಭೂಕಂಪನದ ವಿಚಾರದಲ್ಲಿ ಸವಿವರವಾದ ಮಾಹಿತಿ ನೀಡಿ, ಈ ಭೂಕಂಪದ ಬಗ್ಗೆ ಜನರು ಯಾವುದೇ ರೀತಿ ಭೀತಿಗೊಳಗಾಗುವುದು ಬೇಡ ಎಂದು ಹೇಳಿದ್ದಾರೆ.
Kshetra Samachara
28/06/2022 07:29 pm