ಮಂಗಳೂರು: ನಗರದ ಉಳ್ಳಾಲದ ಬಟ್ಟಂಪಾಡಿ ಸಮುದ್ರ ತೀರದಲ್ಲಿ 5.2 ನಾಟಿಕಲ್ ದೂರದಲ್ಲಿ ಭಾಗಶಃ ಮುಳುಗಡೆಗೊಂಡಿರುವ ಸಿರಿಯಾ ದೇಶದ ಹಡಗಿನಿಂದ ತೈಲ ಸೋರಿಕೆಯ ಭೀತಿಯ ಹಿನ್ನೆಲೆಯಲ್ಲಿ ಗುಜರಾತ್‌ನ ಪೋರ ಬಂದರಿನಿಂದ 'ಸಮುದ್ರ ಪಾವಕ್' ಎಂಬ ವಿಶೇಷ ತಂತ್ರಜ್ಞ ಹಡಗು ಶನಿವಾರ ಆಗಮಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೋಸ್ಟ್ ಗಾರ್ಡ್ ಅಧಿಕಾರಿಗಳು, 'ಸಮುದ್ರ ಪಾವಕ್' ಸುಸಜ್ಜಿತವಾದ ಮಾಲಿನ್ಯ ನಿಯಂತ್ರಣ ಹಡಗು. ಇದನ್ನು ಬಳಸಿಕೊಂಡು ಹೆಲಿಕಾಪ್ಟರ್ ಅಥವಾ ಇತರ ಹಡಗುಗಳು ನೆರವಿನಿಂದ ಸಮುದ್ರದಿಂದ ತೈಲ ಹೊರತೆಗೆಯಲು ಪ್ರಯತ್ನ ಮಾಡಲಾಗುತ್ತದೆ. ಸದ್ಯ ಸಮುದ್ರ ಪಾವಕ್ ಹಡಗು ಮುಳುಗಡೆಯಾಗಿರುವ ಸಿರಿಯಾ ದೇಶದ ವಿ.ಎಸ್. ಪ್ರಿನ್ಸೆನ್ಸ್ ಮಿರಾಲ್ ಹಡಗಿನ ಪಕ್ಕದಲ್ಲಿಯೇ ಲಂಗರು ಹಾಕಿದೆ. ಇಲ್ಲಿನ ಪರಿಸ್ಥಿತಿಯ ಅವಲೋಕನ ಮಾಡಿ 150 ಮೆಟ್ರಿಕ್ ಟನ್ ತೈಲ ಹೊರಚೆಲ್ಲುವ ಬಗ್ಗೆ ಯೋಜನೆ ರೂಪಿಸಲಾತ್ತದೆ.
ಸಮುದ್ರ ಪಕ್ಷುಬ್ಧಗೊಂಡು ಹಡಗು ಸಂಪೂರ್ಣ ಮುಳುಗಡೆಯಾದರೆ ತೈಲ ಸೋರಿಕೆಯಾಗುವ ಭೀತಿಯಿದೆ. ಆದ್ದರಿಂದ ತೈಲವನ್ನು ಹೊರತೆಗೆಯುವ ಪ್ರಯತ್ನ ಮಾಡಲಾಗುತ್ತದೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ದ.ಕ.ಜಿಲ್ಲಾ ಡಿಸಿ ಮಾತನಾಡಿ, ಭಾಗಶಃ ಮುಳುಗಡೆಯಾಗಿರುವ ಸಿರಿಯಾ ದೇಶದ ಹಡಗಿನ ಮೇಲೆ ಕೋಸ್ಟ್ ಗಾರ್ಡ್ ನೌಕೆ, 9 ಹಡಗುಗಳು, 3 ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಗಳು ಕಣ್ಗಾವಲು ಇರಿಸಿದೆ. ತೈಲ ಸೋರಿಕೆ ಕಂಡು ಬಂದಲ್ಲಿ ವಿಶೇಷ ಹಡಗು ಸಮುದ್ರ ಪಾವಕ್ ತಂತ್ರಜ್ಞರು ಸೋರಿಕೆ ತಡೆ ಕಾರ್ಯಾಚರಣೆ ನಡೆಸಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
Kshetra Samachara
26/06/2022 02:59 pm