ನೀಲಾವರ : ಕೇಂದ್ರ ಸರಕಾರದ ನವೀಕಿಸಬಹುದಾದ ಇಂಧನ ಇಲಾಖೆ ವತಿಯಿಂದ ಉಡುಪಿ ಜಿಲ್ಲೆಯ ನೀಲಾವರ ಗೋಶಾಲೆಯಲ್ಲಿ ರಾಜ್ಯದ ಮೊದಲ ಗೋಮಯ ಆಧಾರಿತ ಮೊದಲ ಬಯೋ ವಿದ್ಯುತ್ ಘಟಕ ಸ್ಥಾಪನೆಗೆ ಸಿದ್ಧತೆಗಳು ಆರಂಭಗೊಂಡಿವೆ. ಕೇಂದ್ರ ಮಂತ್ರಿ ಭಗವಂತ್ ಖೂಬಾ ಅವರು ಇತ್ತೀಚೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿದ್ದ ಸಂದರ್ಭ, ಗೋಮಯವನ್ನು ಬಳಸಿಕೊಂಡು ವಿದ್ಯುತ್ ತಯಾರಿಸುವ ಬಗ್ಗೆ ಸಮಾಲೋಚನೆ ನಡೆಸಿದ್ದರು.
ಪೇಜಾವರ ಶ್ರೀಗಳು ಈ ಬಗ್ಗೆ ಒಲವು ತೋರಿದ್ದರಿಂದ, ಬಯೋ ವಿದ್ಯುತ್ ಸ್ಥಾವರಗಳ ಅನುಷ್ಠಾನದಲ್ಲಿ ವಿಶೇಷ ಪರಿಣತಿ ಪಡೆದಿರುವ ಪಂಜಾಬ್ ರಿನೀವೇಬಲ್ ಎನರ್ಜಿ ಸಿಸ್ಟಮ್ ಪ್ರೈ ಲಿ ತಜ್ಞರು, ಗೋಶಾಲೆಗೆ ಆಗಮಿಸಿ ಈ ಬಗ್ಗೆ ಸಮೀಕ್ಷೆ ನಡೆಸಿದ್ದಾರೆ.ಈ ಬೆಳವಣಿಗೆಯಿಂದ ಪೇಜಾವರ ವಿಶ್ವಪ್ರಸನ್ನ ಶ್ರೀಗಳು ಖುಷಿಗೊಂಡಿದ್ದು ,ಇದರಿಂದಾಗಿ ದೇಶಿ ಗೋ ರಕ್ಷಣೆ ಕೆಲಸಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
28/10/2021 03:53 pm