ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಬ್ಲಾಕ್ ಮಾಡಿರುವ ಸಿಎಸ್ಇ VLE ಐಡಿ ಆ್ಯಕ್ಟಿವ್ ಮಾಡಿ"

ಮಂಗಳೂರು: ಸಿಎಸ್ ಇ(ಕಾಮನ್ ಸರ್ವಿಸ್ ಸೆಂಟರ್) ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಎಲ್ಇಗಳ (ಗ್ರಾಮ ಮಟ್ಟದ ಉದ್ಯಮಿ) ಐಡಿಗಳನ್ನು ಶಾಶ್ವತವಾಗಿ ಬ್ಲಾಕ್ ಮಾಡಲಾಗಿದ್ದು, ಇದರಿಂದ ವಿಎಲ್ ಇಗಳು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ‌.

ಸಂಬಂಧಪಟ್ಟವರಲ್ಲಿ ಈ ಬಗ್ಗೆ ಅವಲತ್ತುಕೊಂಡರೂ, ಈವರೆಗೆ ಯಾವುದೇ ಪರಿಹಾರ ದೊರಕಿಲ್ಲ ಎಂದು ದ.ಕ. ಕೆಎ ಸಿಎಸ್ ಸಿ ವಿಎಲ್ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಎಸ್‌.ಅಬೂಬಕ್ಕರ್ ಅರ್ಲಪದವು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಸರಕಾರದ ಯೋಜನೆಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸಿಎಸ್ ಸಿ ಐಡಿಗಳನ್ನು ಪಡೆದು ಬಂಡವಾಳ ಹೂಡಿ ಸೆಂಟರ್ ಗಳನ್ನು ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದ್ದರೆ, ಇದೀಗ ನಮ್ಮ ಐಡಿಗಳನ್ನೇ ಬ್ಲಾಕ್ ಮಾಡಿ ನಮಗೆ ಸೆಂಟರ್ ಗಳನ್ನು ನಡೆಸದಂತೆ ಮಾಡಲಾಗಿದೆ.

2018ರ ಬಳಿಕ ನಮ್ಮ ವ್ಯಾಲೆಟ್ ನಲ್ಲಿ ಕಡಿಮೆ ಹಣ ಪಾವತಿಯಾಗಿದೆ. ಉಳಿದ ಹಣವನ್ನು ಬ್ಯಾಂಕ್ ಗೆ ಪಾವತಿ ಮಾಡಿ ಎಂದು ಸತಾಯಿಸಲಾಗುತ್ತಿದೆ. ಇದೀಗ 2020 ಡಿ.31 ರಂದು ಯಾವುದೇ ಮಾಹಿತಿ ಇಲ್ಲದೆ ನಮ್ಮ ಸಿಎಸ್ ಸಿ ಐಡಿಗಳನ್ನು ಬ್ಲಾಕ್ ಮಾಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರಲ್ಲಿ ವಿಚಾರಿಸಿದರೂ ತಾಂತ್ರಿಕ ಕಾರಣಗಳಿಂದ ಬ್ಲಾಕ್ ಮಾಡಲಾಗಿದೆ ಎಂಬ ಉತ್ತರ ಬರುತ್ತಿದೆ. ತಾಂತ್ರಿಕ ತೊಂದರೆಗಳನ್ನು ಮುಂದಿಟ್ಟು ನಮ್ಮ ಐಡಿಗಳನ್ನು ಬ್ಲಾಕ್ ಮಾಡೋದು ಎಷ್ಟು ಸರಿ? ಇದರಿಂದ ದ.ಕ. ಜಿಲ್ಲೆಯಲ್ಲಿ 300ಕ್ಕೂ ಅಧಿಕ ವಿಎಲ್ಇಗ‌ಳು ಬೀದಿಪಾಲಾಗಿದ್ದಾರೆ. ಅಲ್ಲದೆ, ಬಹಳಷ್ಟು ಮಂದಿ ಫಲಾನುಭವಿಗಳು ಸಿಎಸ್ ಸಿ ಸೆಂಟರ್ ಗಳು ಇಲ್ಲದೆ ಪಾಡು ಪಡುವಂತಾಗಿದೆ ಎಂದು ಎಸ್‌.ಅಬೂಬಕ್ಕರ್ ಅರ್ಲಪದವು ಅಳಲು ತೋಡಿಕೊಂಡರು.

Edited By : Manjunath H D
Kshetra Samachara

Kshetra Samachara

09/02/2021 06:46 pm

Cinque Terre

28.16 K

Cinque Terre

0