ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೃಷಿಕರಿಗಾಗಿಯೇ 'ಅಗ್ರಿಬೋಟ್' ಮೂಲಸಾಧನ ಅಭಿವೃದ್ಧಿಪಡಿಸಿದ ಬಾಲಕ

ವರದಿ : ಇರ್ಷಾದ್ ಕಿನ್ನಿಗೋಳಿ, ಪಬ್ಲಿಕ್ ನೆಕ್ಸ್ಟ್, ಮಂಗಳೂರು

ಮಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ರೈತರಿಗಾಗಿಯೇ ಸಾಧನವೊಂದನ್ನ ಅಭಿವೃದ್ಧಿಪಡಿಸಿದ್ದಾನೆ. 'ಅಗ್ರಿಬೋಟ್' ಹೆಸರಿನ ಈ ಸಾಧನವನ್ನ ಅಭಿವೃದ್ಧಿಪಡಿಸಿದ ಈ ಬಾಲಕನ ಹೆಸರು ಸಾರ್ಥಕ್ ಎಸ್. ಕುಮಾರ್. ನಗರದ ಎಕ್ಸ್ ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಆಗಿರುವ ಸಾರ್ಥಕ್ ಈ ಹಿಂದೆಯೂ ಕಾರಿನಲ್ಲಿ ಬಳಸಬಹುದಾದ ಡಸ್ಟ್ ಬಿನ್ ಮಾದರಿಯಲ್ಲಿ 'ಸ್ವಚ್ಛ ಬಿನ್' ಅನ್ನೋ ಸಾಧನವನ್ನೂ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾನೆ. ಇದೀಗ 'ಅಗ್ರಿಬೋಟ್' ಅನ್ನೋ ಕಾನ್ಸೆಪ್ಟ್ ಕೈಗೆತ್ತಿಕೊಂಡು ನಡೆಸಿದ ಸಂಶೋಧನೆ ನಿಜಕ್ಕೂ ಸಾರ್ಥಕ್ ಕಂಡ ಅದ್ಭುತ ಕಲ್ಪನೆ ಅಂದರೆ ತಪ್ಪಾಗದು. 9 ನೇ ತರಗತಿಯಲ್ಲೇ ರೈತರಿಗಾಗಿ ಏನಾದ್ರೂ ಅಬಿವೃದ್ಧಿಪಡಿಸಬೇಕೆಂದಿದ್ದ ಸಾರ್ಥಕ್ ಕೊನೆಗೂ ದ್ವಿತೀಯ ಪಿಯುನಲ್ಲಿ ಅದನ್ನ ಸಮರ್ಥವಾಗಿ ಸಾಧಿಸಿ ತೋರಿಸಿದ್ದಾನೆ.

ಮಂಗಳೂರು ನಗರದಲ್ಲಿರುವ ಸಾರ್ಥಕ್, ಸುನಿಲ್ ಕುಮಾರ್ ಹಾಗೂ ಪ್ರೀತಿ ಕರ್ಕೇರಾ ಅವರ ಪುತ್ರ. ಎಂಟನೇ ತರಗತಿಯಲ್ಲಿ ಕಂಪ್ಯೂಟರ್ ನ 'C++' ಭಾಷೆ ಕಲಿತಿದ್ದ ಸಾರ್ಥಕ್ ಅದಾಗಲೆ ಹಲವು ಪರಿಣಿತರ ಅಚ್ಚರಿಗೂ ಕಾರಣವಾಗಿದ್ದ. ಇದೀಗ ಈತ ಅಭಿವೃದ್ಧಿಪಡಿಸಿದ ಅಗ್ರಿಬೋಟ್ ರೈತರಿಗೆ ಹೇಳಿ ಮಾಡಿಸಿದಂತಹ ಸಾಧನ. ಕಾರಣ, ಜೆಸಿಬಿ ಯಂತ್ರದಂತೆ ಕಾಣುವ ಈ ಸಾಧನದ ಮುಂಭಾಗದಲ್ಲಿರುವ ಭಾಗವೊಂದು ಮಣ್ಣನ್ನ ಎತ್ತಿಕೊಂಡು ಅದರಲ್ಲಿರುವ ತೇವಾಂಶ, ಸತ್ವಗಳನ್ನ ಆ್ಯಪ್ ಸಹಾಯದಿಂದ ಕ್ಷಣಾರ್ಧದಲ್ಲೇ ಸಂದೇಶ ಕಳುಹಿಸುತ್ತದೆ. ಈ ಮಣ್ಣಲ್ಲಿ ಯಾವ ಬೆಳೆ ಸೂಕ್ತ, ಮಣ್ಣಿನ ತೇವಾಂಶ ಕುರಿತ ಮಾಹಿತಿಯನ್ನ ಹಿರಿಯರ ಮಾರ್ಗದರ್ಶನದಲ್ಲಿ ಸಾರ್ಥಕ್ ಅಭಿವೃದ್ಧಿಪಡಿಸಿದ 'ಅಗ್ರಿಬೋಟ್' ಆ್ಯಪ್ ಮೂಲಕ ಸಂದೇಶಗಳು ಮೊಬೈಲ್ ಸೇರುತ್ತವೆ. ಇದು ಕೃಷಿಕರ ಪಾಲಿಗೆ ಅತ್ಯಂತ ಲಾಭದಾಯಕ. ಇಲ್ಲದಿದ್ದರೆ ರೈತರೇನಾದರೂ ಮಣ್ಣಿನ ಪರಿಶೀಲನೆಗಾಗಿ ಲ್ಯಾಬ್ ಗೆ ಕಳುಹಿಸಿದ್ದಲ್ಲಿ, ಅದರ ವರದಿ ತಲುಪಲು ಎರಡು ವಾರಗಳಿಗೂ ಅಧಿಕ ಸಮಯ ಬೇಕಿದೆ.

ಏನೇ ಅಗಲಿ, ದ್ವಿತೀಯ ಪಿಯುಸಿ ಹಂತದಲ್ಲೇ ಹತ್ತು ಹಲವು ಪ್ರಶಸ್ತಿ ಭಾಜನರಾಗಿರುವ ಸಾರ್ಥಕ್ ಎಸ್. ಭವಿಷ್ಯ ಉತ್ತುಂಗಕ್ಕೆ ಏರಲಿ, ದೇಶಕ್ಕೆ ಕರುನಾಡ ಈ ಕುಡಿಯಿಂದ ಇನ್ನಷ್ಟು ಸೇವೆ ಸಿಗುವಂತಾಗಲಿ ಅನ್ನೋದೆ ನಮ್ಮ ಆಶಯ.

Edited By : Nagesh Gaonkar
Kshetra Samachara

Kshetra Samachara

07/11/2020 01:47 pm

Cinque Terre

16.92 K

Cinque Terre

5