ಮಂಗಳೂರು: ನವರಾತ್ರಿಯ ಕೊನೆಯ ದಿನವಾದ ಇಂದು ವಿಜಯದಶಮಿಯ ಪ್ರಯಕ್ತ ಎಲ್ಲೆಡೆ ಚಿಣ್ಣರಿಗೆ ವಿದ್ಯಾರಂಭದ ಸಂಭ್ರಮ ನಡೆಯಿತು.
ನಗರದ ಮಂಗಳಾದೇವಿ ದೇವಸ್ಥಾನ, ಹಳೆಕೋಟೆ ಮಾರಿಯಮ್ಮ ದೇವಸ್ಥಾನ, ಕಲ್ಕೂರ ಪ್ರತಿಷ್ಠಾನದ ಮಂಜುಪ್ರಾಸಾದದಲ್ಲಿ ಮಕ್ಕಳಿಗೆ ವಿದ್ಯಾರಂಭ ಸೇವೆ ನಡೆಯಿತು. ಅಕ್ಕಿಯಲ್ಲಿ ಓಂಕಾರ, ಅಕಾರಾದಿಗಳನ್ನು ಬರೆದು ಮಕ್ಕಳ ವಿದ್ಯಾರಂಭಕ್ಕೆ ಮುನ್ನುಡಿ ಬರೆಯಲಾಯಿತು.
ನೂರಾರು ಪುಟ್ಟ ಪುಟ್ಟ ಮಕ್ಕಳಿಗೆ ಶಾರದಾ ಮಾತೆಯ ಪೂಜೆಯ ಬಳಿಕ ವಿದ್ಯಾರ್ಜನೆಗೆ ಮುನ್ನುಡಿ ಹಾಕಲಾಯಿತು. ಇಂದು ಮಕ್ಕಳಿಗೆ ವಿದ್ಯಾರಂಭ ಮಾಡಿದರೆ ಮುಂದಕ್ಕೆ ಅವರು ಜ್ಞಾನವಂತರು ಆಗುತ್ತಾರೆ ಎಂಬ ನಂಬಿಕೆಯಿದೆ.
Kshetra Samachara
05/10/2022 12:54 pm