ಬ್ರಹ್ಮಾವರ: ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಇಲ್ಲಿನ ಪ್ರಸಿದ್ಧ ಸಾಲಿಗ್ರಾಮದ ದೇವಸ್ಥಾನದ ವತಿಯಿಂದ ಚಂಡಿಕಾ ಹೋಮವನ್ನು ನಡೆಸಲಾಯಿತು. ದೇವಳದ ತಂತ್ರಿಗಳಾದ ವೇ.ಮೂ.ಕೃಷ್ಣ ಸೋಮಯಾಜಿಯವರು ಸಹ ಪುರೋಹಿತರ ಸಹಕಾರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಆಡಳಿತ ಮಂಡಳಿಯ ಸದಸ್ಯರಾದ ಕೃಷ್ಣಾಪುರ ಪಿ. ಸದಾಶಿವ ಐತಾಳ ದಂಪತಿ ಹೋಮದ ಯಜಮಾನತ್ವವನ್ನು ವಹಿಸಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ಡಾ ಕೆ.ಎಸ್ ಕಾರಂತ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಕೋಶಾಧಿಕಾರಿ ವೇ.ಮೂ. ಪರಶುರಾಮ ಭಟ್ಟ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
01/10/2022 10:58 pm