ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶತಮಾನೋತ್ಸವದ ಸಂಭ್ರಮದಲ್ಲಿ ರಥಬೀದಿಯ ಶಾರದಾ ಮಹೋತ್ಸವ; ವಿಶೇಷ ಅಂಚೆ ಚೀಟಿ ಬಿಡುಗಡೆ

ಮಂಗಳೂರು: ನಗರದ ರಥಬೀದಿ ಶ್ರೀವೆಂಕಟರಮಣ ದೇವಸ್ಥಾನ ಆಚಾರ್ಯ ಮಠದ ಶಾರದಾ ಮಹೋತ್ಸವ ಈ ಬಾರಿ ಶತಮಾನೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಕ್ಷೇತ್ರದ ಸರಸ್ವತಿ ಕಲಾ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಚೀಟಿ ಬಿಡುಗಡೆಯಾಯಿತು.

ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕ ಹರ್ಷ, ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಎನ್. ಡಾ.ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ‌ ಬಾಲಕೃಷ್ಣ ಶೆಣೈ, ಕೋಶಾಧಿಕಾರಿ ಪಂಡಿತ ವಿಠಲ ಆಚಾರ್ಯ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಪಂಡಿತ್ ನರಸಿಂಹ ಆಚಾರ್ಯ, ಕೆಎಸ್‌ಎಸ್‌ಐಎ ಪ್ರೆಸಿಡೆಂಟ್ ಕೌನ್ಸಿಲ್ ಮೆಂಬರ್ ಬೆಂಗಳೂರು ಅರುಣ್ ಪಡಿಯಾರ್ ಉಪಸ್ಥಿತರಿದ್ದರು.

ಶತಮಾನೋತ್ಸವದ ಸಂಭ್ರಮದಲ್ಲಿರುವ ರಥಬೀದಿಯ ಆಚಾರ್ಯ ಮಠದ ಶ್ರೀ ಶಾರದ ಮಹೋತ್ಸವದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾದರು. ಈ ವೇಳೆ ಅವರು ಶಾರದಾ ಮಾತೆಯ ದರ್ಶನ ಪಡೆದರು.

Edited By : Abhishek Kamoji
Kshetra Samachara

Kshetra Samachara

27/09/2022 09:44 pm

Cinque Terre

2.22 K

Cinque Terre

0

ಸಂಬಂಧಿತ ಸುದ್ದಿ