ಬ್ರಹ್ಮಾವರ: ದೇವಾಲಯಗಳ ನಗರ ಬಾರಕೂರು ಸಿಂಹಾಸನ ಗುಡ್ಡೆಯ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ನವರಾತ್ರಿಯಲ್ಲಿ ಪ್ರತಿ ದಿನ ನಿಸರ್ಗದತ್ತ ಬಣ್ಣಗಳಿಂದ ಶ್ರೀ ಚಕ್ರವನ್ನು ರಚಿಸಿ ಪೂಜಿಸುವ ಪರಂಪರೆ ಈಗಲೂ ಇದೆ.
ಇಲ್ಲಿನ ದೇವಸ್ಥಾನದಲ್ಲಿ ಇರುವ ಮೂರ್ತಿಯ ಮುಂದೆ ಶ್ರೀ ಚಕ್ರ ರಚನೆ ಮಾಡಲಾಗುತ್ತದೆ. ನಿಸರ್ಗದತ್ತ 5 ಬಣ್ಣಗಳಿಂದ ಮೂರು ವೃತ್ತ 43 ತ್ರಿಕೋನ ಮತ್ತು ದಳಗಳನ್ನು ರಚಿಸಲಾಗುತ್ತದೆ. ಕುಂಕುಮ, ಅರಸಿನ, ರಂಗೋಲಿ ಪುಡಿಯಿಂದ ಬಿಳಿ ಬಣ್ಣ, ಜಂಗಮ ಸೊಪ್ಪಿನಿಂದ ಹಸಿರು ಬಣ್ಣ, ಭತ್ತದ ಹೊಟ್ಟಿನಿಂದ ಕಪ್ಪು ಬಣ್ಣವನ್ನು ತಯಾರು ಮಾಡಲಾಗುತ್ತದೆ.
ಇಬ್ಬರು ಸೇರಿ ಶ್ರೀ ಚಕ್ರವನ್ನು ರಚಿಸಲು 4 ಗಂಟೆ ಅವದಿ ಬೇಕಾಗುತ್ತದೆ. ನವರಾತ್ರಿಯಲ್ಲಿ ಮಾತ್ರ ನಡೆಯುವ ಅಲಂಕೃತ ಶ್ರೀ ಚಕ್ರವನ್ನು ಮಧ್ಯಾಹ್ನ ಪೂಜೆಯ ಬಳಿಕ ವಿಸರ್ಜನೆ ಗೊಳಿಸಿ ಮತ್ತೆ ಶ್ರೀ ಚಕ್ರ ರಚಿಸುವ ಏಕೈಕ ದೇವಸ್ಥಾನ ಇದಾಗಿದ್ದು, ಸರಕಾರದ ತಸ್ತೀಕು ಹಣ ಮತ್ತು ಸಾರ್ವಜನಿಕ ಭಕ್ತಾಧಿಗಳಿಂದ ನಡೆಯುತ್ತಿದೆ. ಪ್ರಸಾಧ್ ಭಟ್ ಇಲ್ಲಿನ ಅರ್ಚಕರಾಗಿ ವ್ಯವಸ್ಥಾಪಕರಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
PublicNext
26/09/2022 10:27 am