ಕೆರೆಕಾಡು: ಇಲ್ಲಿಗೆ ಸಮೀಪದ ಬೆಳ್ಳಾಯರು ಕೆರೆಕಾಡು ಸಾರ್ವಜನಿಕ ಶ್ರೀ ಕಟ್ಟೆ ಪೂಜೋತ್ಸವ ಸಮಿತಿ ವತಿಯಿಂದ ಪೂಪಾಡಿ ಕಟ್ಟೆಯ ಆವರಣದಲ್ಲಿ ಅಶ್ವತ್ಥ ನಾರಾಯಣ ಪೂಜೆ ಮತ್ತು ನವಗ್ರಹವನ ಪ್ರತಿಷ್ಠೆಯು ವೇಮೂ ಅನಂತರಾಜ ಭಟ್ ಹೆಜಮಾಡಿ ,ಅರ್ಚಕ ರಾಘವೇಂದ್ರ ರಾವ್ ನೇತೃತ್ವದಲ್ಲಿ ನಡೆಯಿತು.
ಪ್ರಾತಕಾಲ ವಿಶೇಷ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಗಣ ಹೋಮ ಹಾಗೂ ಅಶ್ವತ್ಥ ನಾರಾಯಣ ಪೂಜೆ ನಡೆಯಿತು. ಬೆಳಿಗ್ಗೆ 8.30ಕ್ಕೆ ನವಗ್ರಹ ಪೂಜೆ ಹಾಗೂ ನವಗ್ರಹವನ ಪ್ರತಿಷ್ಠೆ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಮೋಹನದಾಸ, ದಮಯಂತಿ ಶೆಟ್ಟಿಗಾರ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್‌ನ ವೆಂಕಟೇಶ ಹೆಬ್ಬಾರ್, ಸುರೇಶ್ ರಾವ್ ನೀರಳಿಕೆ, ರವಿ ಶೆಟ್ಟಿ ಪುನರೂರು, ರಾಜೇಶ್ ಕೆರೆಕಾಡು,ಸಾರ್ವಜನಿಕ ಶ್ರೀ ಕಟ್ಟೆ ಪೂಜೋತ್ಸವ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
10/09/2022 11:13 am