ಕಾಪು: ಉಡುಪಿ ಪ್ರಾಂತ್ಯದಲ್ಲಿಯೇ ಅತಿ ದೊಡ್ಡ ಚರ್ಚ್ ಎಂಬ ಹೆಗ್ಗಳಿಕೆಯ ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಕನ್ಯಾ ಮರಿಯಮ್ಮನ ಜನ್ಮದಿನ ಮೋಂತಿ ಫೆಸ್ಟ್ ಅನ್ನು ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಪುಟ್ಟ ಮಕ್ಕಳು ಕನ್ಯಾ ಮರಿಯಮ್ಮಗೆ ಹೂ ಸಮರ್ಪಿಸಿದ ಬಳಿಕ ಆಯಾ ಗ್ರಾಮದ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಗಳನ್ನು ಮೆರವಣಿಗೆಯಲ್ಲಿ ಚರ್ಚ್ ಒಳಗೆ ಕೊಂಡೊಯ್ದ ಬಳಿಕ ಪವಿತ್ರ ಬಲಿ ಪೂಜೆಯಲ್ಲಿ ಭಕ್ತಾದಿಗಳು ಭಾಗವಹಿಸಿದರು.
ಬಳಿಕ ಪ್ರತಿ ಕುಟುಂಬಕ್ಕೆ ತೆನೆ, ಕಬ್ಬು ಹಾಗೂ ಸಿಹಿತಿಂಡಿ ವಿತರಿಸಲಾಯಿತು. ಪ್ರಧಾನ ಗುರು ರೆ.ಫಾ. ಡಾ.ಲೆಸ್ಲಿ ಡಿಸೋಜ ಅವರು ಬಲಿ ಪೂಜೆ ನೆರವೇರಿಸಿ ಶುಭ ಹಾರೈಸಿದರು. ಫಾ. ರೋಲ್ವಿನ್ ಅರ್ಹಾನ, ಫಾ. ನೆಲ್ಸನ್ ಪೆರಿಸ್, ಡೆಕೋನ್ ಜಾನ್ಸನ್ ಪಿಂಟೊ ಬಲಿ ಪೂಜೆಯಲ್ಲಿ ಪಾಲ್ಗೊಂಡರು.
Kshetra Samachara
08/09/2022 07:08 pm