ಕೋಟ: ಲೋಕ ಕಲ್ಯಾಣಾರ್ಥ ಸಾಲಿಗ್ರಾಮ ಶ್ರೀ ಗುರುನರಸಿಂಹನಿಗೆ ನಿನ್ನೆ ಲಕ್ಷ ತುಳಸಿ ಅರ್ಚನೆ ನಡೆಸಲಾಯಿತು.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದಲ್ಲಿ ಈ ಪ್ರಸಿದ್ಧ ದೇವಾಲಯವಿದೆ. ಶ್ರಾವಣ ಮಾಸದ ಕೊನೆಯ ಶನಿವಾರ ಭಕ್ತರ ಸಮ್ಮುಖ ದೇವಸ್ಥಾನದಲ್ಲಿ ನಿನ್ನೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಗುರುನರಸಿಂಹನಿಗೆ ಲಕ್ಷ ತುಳಸಿ ಅರ್ಚನೆ ಮಾಡಲಾಯಿತು.
ಶ್ರೀ ಗುರುನರಸಿಂಹ ದೇವರಿಗೆ ಪ್ರಧಾನ ಕಲಶಾಭಿಷೇಕವೂ ಸಂಪನ್ನಗೊಂಡಿದ್ದು, ನೂರಾರು ಭಕ್ತರು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿ ದೇವರ ಪ್ರೀತಿಗೆ ಪಾತ್ರರಾದರು.
Kshetra Samachara
28/08/2022 08:38 am