ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಯಿತು.ಪರ್ಯಾಯ ವಿದ್ಯಾಸಾಗರ ತೀರ್ಥ ಸ್ವಾಮೀಜಿಗಳು ಹಾಲು ಹಾಗೂ ನೀರಿನ ಮೂಲಕ ಚಂದ್ರನಿಗೆ ಹಾಗೂ ಕೃಷ್ಣ ದೇವರಿಗೆ ಅರ್ಘ್ಯ ಸಮರ್ಪಣೆ ಮಾಡಿದರು.
ಅರ್ಘ್ಯ ಸಮರ್ಪಣೆ ಬಳಿಕ ಉಂಡೆ ಚಕ್ಕುಲಿಗಳನ್ನು ಶ್ರೀಕೃಷ್ಣ ನಿಗೆ ಅರ್ಪಿಸಲಾಯಿತು.ದೇವರಿಗೆ ಮಹಾಮಂಗಳಾರತಿ ಬಳಿಕ ಮೊದಲು ಶ್ರೀಗಳು ನಂತರ ಮಠದ ಅರ್ಚಕರು ಹಾಗೂ ಭಕ್ತರು ಕೂಡ ಅರ್ಘ್ಯ ಸಮರ್ಪಿಸಿದರು.
ಇದು ಜನ್ಮಾಷ್ಠಮಿಯ ಪ್ರಮುಖ ಧಾರ್ಮಿಕ ವಿಧಿಯೂ ಹೌದು.ಇಂದು ( ಶನಿವಾರ) ಮಧ್ಯಾಹ್ನ ವೈಭವದ ಶ್ರೀಕೃಷ್ಣ ಲೀಲೋತ್ಸವ ಸಂಪನ್ನಗೊಳ್ಳಲಿದ್ದು ಅಷ್ಟಮಿಯ ಸಂಭ್ರಮ ಪರಾಕಾಷ್ಠೆ ತಲುಪಲಿದೆ.
Kshetra Samachara
20/08/2022 08:34 am