ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೃಷ್ಣನ ಕಂಡೀರಾ? ಅಷ್ಢಮಿ ಉಂಡೆ ಚಕ್ಕುಲಿ ತಿಂದೀರಾ?

ಉಡುಪಿ: ಶ್ರೀಕೃಷ್ಣ ಉತ್ಸವಗಳ ರಾಜ ಅಷ್ಠಮಠಗಳಲ್ಲಿ ವರ್ಷವಿಡೀ ಉತ್ಸವಗಳಿರುತ್ತೆ. ಈ ಎಲ್ಲ ಉತ್ಸವಗಳ ರಾಜ, ಕೃಷ್ಣಜನ್ಮಾಷ್ಠಮಿ. ಪರ್ಯಾಯ ಮಹೋತ್ಸವದ ಬಳಿಕ ಕೃಷ್ಣಮಠಕ್ಕೆ ದೊಡ್ಡ ಹಬ್ಬ ಇದು.ಆ.19 ರಂದು ಅಷ್ಢಮಿ ಹಬ್ಬವಾದರೆ ಮರುದಿನ ಅಂದರೆ ಆ.20 ವಿಟ್ಲಪಿಂಡಿ ಅಥವಾ ಶ್ರೀಕೃಷ್ಣಲೀಲೋತ್ಸವ ಎಂದು ಕರೆಯಲ್ಪಡುವ ಹಬ್ಬ ಇದೆ.

ಉಡುಪಿಯಲ್ಲಿ ಈಗಾಗಲೇ ಹಬ್ಬದ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ನೀವು ನಂಬಲಿಕ್ಕಿಲ್ಲ ,ಅಷ್ಟಮಿ ಹಬ್ಬಕ್ಕಾಗಿ ಕೃಷ್ಣಮಠದಲ್ಲಿ ಸಾವಿರಾರು ಉಂಡೆ ಚಕ್ಕುಲಿ ಪ್ರಸಾದ ತಯಾರಾಗಬೇಕು.ಇವುಗಳನ್ನು ಭಕ್ತರಿಗೆ ಹಂಚಲಾಗುತ್ತದೆ.

ಹಬ್ಬದ ಹಾಲು ಪಾಯಸದ ಊಟದ ಜೊತೆಗೆ ಉಂಡೆ ಚಕ್ಕುಲಿ ಪ್ರಸಾದ ಬಹಳ ಫೇಮಸ್.ಸದ್ಯ ಮಠದಲ್ಲಿ ನುರಿತ ಬಾಣಸಿಗರು ಕೃಷ್ಣನಿಗೆ ಪ್ರಿಯವಾದ ಸಾವಿರಾರು ಉಂಡೆ ಚಕ್ಕುಲಿಗಳನ್ನು ತಯರು ಮಾಡಿದ್ದಾರೆ.ಮಠಕ್ಕೆ ಬರುವ ಭಕ್ತರಿಗೆ ಮತ್ತು ಉಡುಪಿಯ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಪ್ರಸಾದವನ್ನು ಹಂಚುವ ಇದು ಸಂಪ್ರದಾಯ.ನೀವು ಬರ್ತೀರಿ ತಾನೆ?

Edited By :
Kshetra Samachara

Kshetra Samachara

19/08/2022 08:14 am

Cinque Terre

17.62 K

Cinque Terre

2

ಸಂಬಂಧಿತ ಸುದ್ದಿ