ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಇಂದು ಸುಂದರಕಾಂಡ ಹವನ ನಡೆಯಿತು. ಇದರ ಪ್ರಯುಕ್ತ ಶ್ರೀ ರಾಮ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿತು.
ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತವನ್ನು ಈ ಬಾರಿ ರಥಬೀದಿಯ ಶ್ರೀ ವೆಂಕಟರಮಣ ದೇವಾಲಯದಲ್ಲಿ ನಡೆಸುತ್ತಿದ್ದಾರೆ. ಈ ಪ್ರಯುಕ್ತ ಇಂದು ಸುಂದರಕಾಂಡ ಹವನ ಹಾಗೂ ಶ್ರೀರಾಮ ಪಟ್ಟಾಭಿಷೇಕವನ್ನು ಕಾಶೀ ಮಠಾಧೀಶ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ನೆರವೇರಿಸಿದರು.
ಈ ಕಾರ್ಯಕ್ರಮದ ವೇಳೆ ಶ್ರೀದೇವರಿಗೆ ವಿಶೇಷ ಅಭಿಷೇಕಗಳು, ಅಷ್ಟಾವಧಾನ ಸೇವೆ, ಕೋಲಾಟ , ಭರತನಾಟ್ಯ ಸೇವೆಗಳು ನಡೆಯಿತು.
Kshetra Samachara
17/08/2022 03:58 pm