ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ರಾಘವೇಂದ್ರ ಮಠದಲ್ಲಿ ಶ್ರೀ ಗುರು ರಾಯರ 351ನೇ ಆರಾಧನಾ ಮಹೋತ್ಸವ

ಸುಳ್ಯ: ಸುಳ್ಯ ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್, ಶ್ರೀ ಗುರು ರಾಘವೇಂದ್ರ ಮಠದ ಸಹಯೋಗದಲ್ಲಿ ಶ್ರೀ ಗುರು ರಾಯರ 351ನೇ ಆರಾಧನಾ ಮಹೋತ್ಸವ ಆ.13 ರಂದು ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಜರುಗಿತು.

ಮಠದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಹರಿ ಎಳಚಿತ್ತಾಯ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮವು ನಡೆಯಿತು. ಬೆಳಗ್ಗೆ ದೇವತಾ ಪ್ರಾರ್ಥನೆಯಾಗಿ, ಮಹಾಗಣಪತಿ ಹೋಮ ನಡೆದು, ಪವಮಾನ ಹೋಮ, ಪವಮಾನ ಅಭಿಷೇಕವಾಯಿತು. ಬಳಿಕ ಪುತ್ತೂರು ಆಂಜನೇಯ ಮಹಿಳಾ ಯಕ್ಷಗಾನ ತಂಡದವರಿಂದ ಶರಾಘಾತ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಮಧ್ಯಾಹ್ನ ಗುರು ರಾಯರಿಗೆ ಅಲಂಕಾರ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಸಂಜೆ ರಾಯರ ಪಲ್ಲಕ್ಕಿ ಸೇವೆಯಾಗಿ ತೊಟ್ಟಿಲ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ಚೆಂಡೆ ವಾದನ, ಸ್ಯಾಕ್ಸ್ ಫೋನ್ ವಾದನ, ವೇದ ಪಾರಾಯಣ, ಸಂಗೀತ ಕಾರ್ಯಕ್ರಮ, ಭಜನಾ ಸೇವೆ, ಭರತನಾಟ್ಯ ಹಾಗೂ ಚಿಕ್ಕ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ನೆರವೇರಿತು. ನಂತರ ಅಷ್ಟಾವಧಾನ, ಮಹಾಪೂಜೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು. ಆಗಮಿಸಿದ ಎಲ್ಲರಿಗೂ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಬೃಂದಾವನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಂ.ಎನ್‌.ಶ್ರೀಕೃಷ್ಣ ಸೋಮಯಾಗಿ, ಅರ್ಚಕ ರವಿರಾಜ ನಾವಡ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಇದ್ದರು.

Edited By : Manjunath H D
Kshetra Samachara

Kshetra Samachara

15/08/2022 09:50 am

Cinque Terre

5.94 K

Cinque Terre

0

ಸಂಬಂಧಿತ ಸುದ್ದಿ