ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕಡಿಯಾಳಿ ದೇವಸ್ಥಾನದ ಧ್ವಜಸ್ತಂಭ ಎಣ್ಣೆ ಸಮರ್ಪಣಾ ಕಾರ್ಯಕ್ರಮ:ಭಕ್ತರಿಗೆ ಸಂಭ್ರಮ

ಉಡುಪಿ: ಸಮಗ್ರವಾಗಿ ಜೀರ್ಣೋದ್ಧಾರಗೊಂಡು ವೈಭವದಿಂದ ಬ್ರಹ್ಮಕಲಶೋತ್ಸವ ಸಂಪನ್ನಗೊಂಡ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಕೊಡಿ ಮರದ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಸಮರ್ಪಣಾ ಕಾರ್ಯಕ್ರಮವು ಸಂಪನ್ನಗೊಂಡಿತು.

ದೇಗುಲದ ಪ್ರಧಾನ ತಂತ್ರಿಗಳಾದ ಪಾಡಿಗಾರು ಶ್ರೀನಿವಾಸ ತಂತ್ರಿ ಮತ್ತು ಅರ್ಚಕರಾದ ಕೆ ರಾಧಾಕೃಷ್ಣ ಉಪಾಧ್ಯ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯ ನೆರವೇರಿತು. ಭಕ್ತರು, ಗ್ರಾಮಸ್ಥರು ಸೇರಿ ಕೊಡಿ ಮರಕ್ಕೆ 186 ಲೀಟರ್ ಶುದ್ಧ ಸಾವಯವ ಎಳ್ಳೆಣ್ಣೆ ಸಮರ್ಪಿಸಿದರು. ಈ ಎಳ್ಳೆಣ್ಣೆ ಸಮರ್ಪಣಾ ಕಾರ್ಯಕ್ರಮವು ಅಗಸ್ಟ್ 20 ರತನಕ ದೇಗುಲದಲ್ಲಿ ಅವಕಾಶ ಇರಲಿದೆ. ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಈ ಅವಕಾಶವನ್ನು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಗೇಶ ಹೆಗ್ಡೆ ಜನತೆಯಲ್ಲಿ ವಿನಂತಿಸಿದ್ದಾರೆ.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ಕಟ್ಟೆ ರವಿರಾಜ ಆಚಾರ್ಯ, ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ ಶೆಟ್ಟಿ, ಧ್ವಜಸ್ತಂಭ ಪೀಠದ ದಾನಿಗಳಾದ ಸುಭಾಷ್ ಚಂದ್ರ ಹೆಗ್ಡೆ ಕಡಿಯಾಳಿ ,ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ ದೇಗುಲದ ಅರ್ಚಕರು, ಗ್ರಾಮಸ್ಥರು ಮತ್ತು ದೇಗುಲದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

05/08/2022 08:34 pm

Cinque Terre

29.14 K

Cinque Terre

0

ಸಂಬಂಧಿತ ಸುದ್ದಿ