ಕೋಟ: ರಾಜ್ಯದಲ್ಲಿ ಇನ್ನೂ ಮುಂಗಾರು ಪ್ರವೇಶವಾಗಿಲ್ಲ. ರೈತರು ಆಕಾಶ ನೋಡುತ್ತಿದ್ದಾರೆ. ನಗರದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ ಮುಂಗಾರು ಪ್ರವೇಶವಾಗಲಿ ಎಂದು ಜನ ಎಲ್ಲೆಡೆ ಪ್ರಾರ್ಥಿಸುತ್ತಿದ್ದಾರೆ.
ಜಿಲ್ಲೆಯ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದಲ್ಲಿ ಉತ್ತಮ ಮಳೆ ಬೆಳೆ ಹಾಗೂ ಲೋಕಕಲ್ಯಾಣಾರ್ಥ ಸಿಯಾಳಾಭಿಷೇಕ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದಲ್ಲಿ ಶ್ರೀ ಗುರುನರಸಿಂಹ, ಅಂಜನೇಯ ಹಾಗೂ ಪರಿವಾರ ದೇವತೆಗಳಿಗೆ ಸೀಯಾಳ ಅಭಿಷೇಕವನ್ನು ಅರ್ಚಕ ವೇದಮೂರ್ತಿ ಜನಾರ್ದನ ಅಡಿಗ ನೇತ್ರತ್ವದಲ್ಲಿ ನೆರವೇರಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ.ಎಸ್.ಕಾರಂತ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ಸಹಿತ ಭಕ್ತಾದಿಗಳು ಈ ಸಂದರ್ಭ ಉಪಸ್ಥಿತರಿದ್ದರು.
Kshetra Samachara
16/06/2022 02:26 pm