ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೈ ತುಳುನಾಡ್ ಸಂಘಟನೆ ವತಿಯಿಂದ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಲು ಅಡ್ಡಿಯಾಗಿರುವ ತಾಂತ್ರಿಕ ದೋಷ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿ, ಪೂಜೆ ಸಲ್ಲಿಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣರು ತುಳು ಭಾಷೆಗೆ ಆದಷ್ಟು ಬೇಗ ಮಾನ್ಯತೆ ಸಿಕ್ಕಿ ರಾಜ್ಯ ಭಾಷೆಗೆ ಸೇರಲಿ. ತುಳುಭಾಷೆಯನ್ನು ಉಳಿಸುವುದು ತುಳುವರ ಕರ್ತವ್ಯ. ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೈ ಜೋಡಿಸುವಂತಾಗಲಿ. ಎಲ್ಲ ಅಡೆತಡೆ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭ ಎನ್‌ಎಸ್‌ಯುಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್, ಜೈ ತುಳುನಾಡ್ ಸಂಘದ ಪ್ರಧಾನ ಕಾರ್ಯದರ್ಶಿ ಅವಿನಾಶ್ ಮುಕ್ಕ, ಸ್ಥಾಪಕ ಸಮಿತಿಯ ಕಿರಣ್ ತುಳುವೆ, ಸುಮಂತ್ ಹೆಬ್ರಿ, ಉದಯ್ ಪೂಂಜ, ದೀಕ್ಷಿತಾ ಮಧ್ಯ, ರಕ್ಷಿತ್ ಕುಡುಪು, ರಾಜೇಶ್ ನೀರುಡೆ, ನಿರಂಜನ್ ಪೊರ್ಕೋಡಿ, ಕೀರ್ತನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/06/2022 10:48 am