ಮಂಗಳೂರು: ಮಂಗಳೂರು ವಿವಿ ಕಾಲೇಜು ಹಿಜಾಬ್ ವಿವಾದ ಸಂಬಂಧ ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಇಂದು ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ರು.ಮಂಗಳೂರು ವಿವಿ ಸಮನ್ವಯ ಸಮಿತಿ ಹೆಸರಲ್ಲಿ ನಡೆಸಲಾದ ಸುದ್ದಿಗೋಷ್ಟಿಯಲ್ಲಿ ಹಿಜಾಬ್ ವಿದ್ಯಾರ್ಥಿನಿ ಗೌಸಿಯಾ ಮಾತನಾಡಿ, ಈ ಹಿಂದೆ ವಿವಿ ಕಾಲೇಜಿನಲ್ಲಿ ಯಾವುದೇ ಹಿಜಾಬ್ ಸಮಸ್ಯೆ ಇರಲಿಲ್ಲ. ಹೈಕೋರ್ಟ್ ಆದೇಶದ ಬಳಿಕವೂ ನಾವು ಹಿಜಾಬ್ ಹಾಕಿಕೊಂಡು ಹೋಗಿದ್ದೇವೆ. ಆದರೆ ಕೆಲ ದಿನಗಳ ಬಳಿಕ ರಾತ್ರೋರಾತ್ರಿ ಈ ಸಮಸ್ಯೆ ಆರಂಭವಾಗಿದೆ ಎಂದಿದ್ದಾರೆ.
ಈ ವಿಚಾರದಲ್ಲಿ ನಾವು ಹಲವು ಬಾರಿ ವಿವಿ ಕುಲಪತಿ ಬಳಿಗೆ ಹೋಗಿದ್ದೆವು. ಆಗ ವಿಸಿಯವರು ಡಿಸಿ ಬಳಿ ಕೋರ್ಟ್ ಆದೇಶದ ಸ್ಪಷ್ಟನೆಯ ಲೆಟರ್ ತನ್ನಿ ಅಂದ್ರು. ಹೀಗಾಗಿ ನಾವು ಡಿಸಿ ಬಳಿಗೆ ಹೋಗಿದ್ದೆವು. ಆದರೆ ಅವರು ಮೊದಲಿಗೆ ಸಿಗಲಿಲ್ಲ. ಆ ಬಳಿಕ ಮತ್ತೆ ಕಾಲೇಜಿಗೆ ಹೋದಾಗ ನಮ್ಮನ್ನ ಹೊರಗೆ ಹಾಕಿದ್ದಾರೆ.
ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುವ ಬೆದರಿಕೆ ಹಾಕಿದ್ದರು. ಆಗ ಪ್ರಾಂಶುಪಾಲರು ನಮ್ಮ ಪ್ರವೇಶ ನಿರ್ಬಂಧ ಮಾಡಿ ಆದೇಶ ಮಾಡಿದ್ರು. ಹೀಗಾಗಿ ನಾವು ಲೈಬ್ರೆರಿಗೆ ಹೋಗಿ ಹೊರಗೆ ಕೂತೆವು. ಆ ಬಳಿಕ ನಮ್ಮನ್ನ ಹಿಜಾಬ್ ಧರಿಸಿ ಕ್ಯಾಂಪಸ್ ಪ್ರವೇಶಕ್ಕೂ ಅನುಮತಿ ನಿರಾಕರಿಸಲಾಯ್ತು. ಎಬಿವಿಪಿ ಪ್ರತಿಭಟನೆ ಬಳಿಕ ನಮ್ಮನ್ನ ಕ್ಯಾಂಪಸ್ ನಿಂದಲೂ ಹೊರಗೆ ಹಾಕಿದ್ರು. ಆ ಬಳಿಕ ನಾವು ಸೋಮವಾರ ಜಿಲ್ಲಾಧಿಕಾರಿಯವ್ರನ್ನ ಭೇಟಿಯಾದೆವು.ನಮ್ಮ ಜೊತೆಗೆ ನಮ್ಮ ಪೋಷಕರು ಕೂಡ ಮನವಿ ಮಾಡಿದ್ದಾರೆ ಎಂದಿದ್ದಾರೆ..
ಇನ್ನು ನಮ್ಮ ಮನವಿ ಇಷ್ಟೇ, ಕಾಲೇಜಿನ ಹಳೆಯ ವಸ್ತ್ರ ಸಂಹಿತೆ ಮುಂದುವರೆಸಿ. ಪ್ರಾಂಶುಪಾಲರಿಗೆ ಶಿರವಸ್ತ್ರ ತೆಗೆಯುವ ಬಗ್ಗೆ ಯಾವುದೇ ಉದ್ದೇಶ ಇಲ್ಲ. ಎಬಿವಿಪಿ ಒತ್ತಡದಿಂದಲೇ ಪ್ರಾಂಶುಪಾಲರು ಈ ಆದೇಶ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಅರೋಪಿಸಿದ್ರು..
PublicNext
03/06/2022 04:25 pm