ಉಡುಪಿ: ಇತಿಹಾಸ ಪ್ರಸಿದ್ಧ ಉಡುಪಿಯ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಭ್ರಮ ಆರಂಭವಾಗಿದೆ. ಒಟ್ಟು ಹತ್ತು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು ಇಂದು ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ನಗರದ ಜೋಡುಕಟ್ಟೆಯಿಂದ ಆರಂಭವಾದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗಿಯಾದರು. ಆರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಟ್ಯಾಬ್ಲೋಗಳು ಸಾಗಿಬಂದವು. ಮಹಾರಾಷ್ಟ್ರದ ದೊಡ್ಡ ಕೊಂಬಿನ ಎತ್ತು, ಉಡುಪಿಯ ಎತ್ತಿನಗಾಡಿ ಪ್ರಮುಖ ಆಕರ್ಷಣೆ ಆಗಿದ್ದವು. ಮೆರವಣಿಗೆಯ ಆರಂಭದಲ್ಲಿ ಬಂದ ಬೃಹದಾಕಾರದ ಹುಲಿಯ ಗಂಭೀರ ನಡಿಗೆ ಎಲ್ಲರನ್ನೂ ಸೆಳೆಯಿತು. ವಿವಿಧ ವೇಷಗಳು ಮೆರವಣಿಗೆಯ ವೈಭವ ಹೆಚ್ಚಿಸಿದವು. ನೂರಾರು ವಾಹನಗಳಲ್ಲಿ ದೇವಸ್ಥಾನಕ್ಕೆ ಭಕ್ತರು ಅಕ್ಕಿ ಬೇಳೆ ಕಾಳು ತೆಂಗಿನಕಾಯಿ ಹಣ್ಣು ಹಂಪಲು ತರಕಾರಿಗಳನ್ನು ನೀಡಿದರು.
Kshetra Samachara
02/06/2022 09:32 pm