ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಪುತ್ತಿಗೆ ಶ್ರೀಗಳಿಂದ ಭಗದ್ಗೀತೆಯ ಮಹಾ ಅಭಿಯಾನ

ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ 4 ನೇ ಪರ್ಯಾಯ ಸಂದರ್ಭದಲ್ಲಿ ಪ್ರತಿಯೊಬ್ಬರ ಮನೆ ಮನದಲ್ಲಿ ಭಗವದ್ಗೀತೆ ಬರೆದು ಕೃಷ್ಣನಿಗೆ ಒಪ್ಪಿಸುವ ಮೂಲಕ ಲೋಕಕಲ್ಯಾಣದ ಕಾರ್ಯಕ್ಕೆ ಹಾಕಿದ್ದಾರೆ. ಶ್ರೀಪಾದರು ಪ್ರತಿ ಪರ್ಯಾಯದಲ್ಲಿ ವಿಭಿನ್ನ ಕೆಲಸ ಕಾರ್ಯಗಳನ್ನು ಮಾಡಿ ಭಕ್ತರ ಮನಗೆದ್ದಿದ್ದಾರೆ. ಈ ಬಾರಿ ತಮ್ಮ ನಾಲ್ಕನೇ ಅವಧಿಯ ಪರ್ಯಾಯಕ್ಕೆ ಆತ್ಮೋದ್ಧಾರ ಮತ್ತು ಲೋಕಕಲ್ಯಾಣಕ್ಕಾಗಿ ಕೋಟಿ ಗೀತಾ ಲೇಖನ ಯಜ್ಞ ಮುಖಾಂತರ ಕೋಟಿ ಕೋಟಿ ಸಂಖ್ಯೆಯಲ್ಲಿ ಭಗವದ್ಗೀತೆಯನ್ನು ಬರೆದು ತಮ್ಮ ಪರ್ಯಾಯ ಕಾಲದಲ್ಲಿ ಕೃಷ್ಣನಿಗೆ ಅರ್ಪಿಸುವ ಮೂಲಕ ಭಗದ್ಗೀತೆಯ ಮಹಾ ಅಭಿಯಾನ ಹಮ್ಮಿಕೊಂಡಿದ್ದಾರೆ.

ಸ್ವಾಮಿಗಳು ಪ್ರಸಾದವಾಗಿ ಲಿಖಿತ ಪುಸ್ತಕವನ್ನು ಕೊಡುತ್ತಿದ್ದು ಪ್ರತಿ ಭಕ್ತರ ಮನೆ ಮನೆಯಲ್ಲೂ ಭಗವದ್ಗೀತೆ ಇರಬೇಕೆಂಬುದು ಸ್ವಾಮಿಗಳ ಮಹದಾಸೆ. ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ ನಂಬರ್ 8055338811 ಸಂಪರ್ಕಿಸಬಹುದಾಗಿದೆ. ಈಗಾಗಲೇ ಕೋಟಿಗೀತ ಲೇಖನ ಯಜ್ಞ ಸಮಿತಿಯನ್ನು ರಚಿಸಿ ಈ ಬಗ್ಗೆ ಮಾಹಿತಿನೀಡಲಾಗುತ್ತಿದೆ. ಇದರೊಂದಿಗೆ ಶ್ರೀಗಳ 4ನೇ ಪರ್ಯಾಯಕ್ಕೆ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು ಮುಂದಿನ ಪರ್ಯಾಯೋತ್ಸವವನ್ನು ವೈಭವದಿಂದ ನಡೆಸಲು ತೀರ್ಮಾನಿಸಿದ್ದಾರೆ.

Edited By :
Kshetra Samachara

Kshetra Samachara

25/05/2022 06:10 pm

Cinque Terre

19.39 K

Cinque Terre

1

ಸಂಬಂಧಿತ ಸುದ್ದಿ