ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ಪೂಜಾ ಮಂದಿರ ಹಿಂದೂಗಳಿಗೆ ಬಿಟ್ಟುಕೊಡಿ:ದರ್ಗಾ ಇದ್ದರೆ ನಾವು ಬಿಟ್ಟು ಕೊಡೋಣ!

ಉಡುಪಿ: ಯಾವುದೋ ಕಾರಣಕ್ಕೆ ಯಾವುದೋ ಕಾಲದಲ್ಲಿ ಧರ್ಮ ಕೇಂದ್ರಗಳು ಮಸೀದಿಗಳಾಗಿ ಪರಿವರ್ತಿತವಾಗಿರುತ್ತವೆ.

ಯಾವುದೋ ದೇವಾಲಯವನ್ನು ಖರೀದಿ ಮಾಡಿ ಮಸೀದಿಯಾಗಿ ಪರಿವರ್ತಿಸಿದ್ದರೆ ನಮ್ಮ ಆಕ್ಷೇಪ ಇಲ್ಲ.

ಯಾವುದೇ ಪೂಜಾ ಸ್ಥಳ ಆಗಿದ್ದರೂ ಕೂಡ ಒಂದು ಸಮಾಜದವರು ಖರೀದಿಸಿ ಮಾರ್ಪಾಟು ಮಾಡಿದ್ದರೂ ಸಮಸ್ಯೆ ಇಲ್ಲ.ಆದರೆ

ಆಕ್ರಮಿಸಿಕೊಂಡು ಪರಿವರ್ತನೆ ಮಾಡಿದ್ದರೆ ಮರು ಪರಿವರ್ತನೆ ಆಗಬೇಕಾದದ್ದು ಅನಿವಾರ್ಯ. ಈಗ ಆಗುತ್ತಿರುವ ಇಂತಹ ಬೆಳವಣಿಗೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಪೇಜಾವರ ಶ್ರೀಗಳು ಉಡುಪಿಯಲ್ಲಿ ಹೇಳಿದ್ದಾರೆ.

ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ,ಈಗ ಇದೊಂದು ಕಾಲಘಟ್ಟ.ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪರಿಪಾಲಿಸಲೇಬೇಕು.ಹಿಂದೆ ಆಗಿಹೋದ ಬಗ್ಗೆ ಕೋರ್ಟ್ ತೀರ್ಮಾನ ಕೊಟ್ಟದ್ದಾದರೆ ಯಾರೂ ಇದನ್ನು ಹಿನ್ನೆಡೆ ಎಂದು ಭಾವಿಸಬಾರದು. ಹಿಂದೂಗಳ ಪೂಜಾ ಮಂದಿರವಾದರೆ ಅದನ್ನು ಹಿಂದೂಗಳಿಗೆ ಬಿಟ್ಟುಕೊಡಿ. ಮುಸಲ್ಮಾನರ ದರ್ಗಾ ಆಗಿದ್ದರೆ ಮುಸಲ್ಮಾನರಿಗೆ ಬಿಟ್ಟುಕೊಡಬೇಕು.

ಸುಪ್ರೀಂ ಕೋರ್ಟ್ ಮಾಡುವ ಮಾರ್ಗದರ್ಶನದಂತೆ ನಾವು ನಡೆಯುವುದು ಸೂಕ್ತ. ತಪ್ಪು ಆಗಿದ್ದರೆ ಅದು ತಪ್ಪೇ,ಸಮರ್ಥನೆ ಮಾಡುವುದು ಸೂಕ್ತ ಅಲ್ಲ.ಸಂಘರ್ಷಕ್ಕೆ ಇಳಿಯದೆ ಸೌಹಾರ್ದ ದಿಂದ ಬಿಟ್ಟುಕೊಡಬೇಕು. ಶಾಂತಿ ನೆಮ್ಮದಿ ನೆಲೆಸಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶ್ರೀಗಳು ,ಸುಪ್ರೀಂ ಕೋರ್ಟ್ ಧ್ವನಿವರ್ಧಕ ಬಳಕೆ ಕುರಿತು ಮಾರ್ಗದರ್ಶನ ಮಾಡಿದೆ.ಎಲ್ಲರೂ ಈ ನಿಯಮ ಪಾಲಿಸಬೇಕು ಎಂದು ಹಿಂದೂ ಸಮಾಜಕ್ಕೆ ಕರೆ ಕೊಡುತ್ತೇನೆ. ವಿಶೇಷ ದಿನ, ವಿಶೇಷ ಆಚರಣೆಗಳ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ವಿಶೇಷ ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡೋಣ ಎಂದು ಮನವಿ ಮಾಡಿದ್ದಾರೆ.

Edited By :
PublicNext

PublicNext

16/05/2022 01:50 pm

Cinque Terre

49.69 K

Cinque Terre

8

ಸಂಬಂಧಿತ ಸುದ್ದಿ