ಬಜಪೆ: ಕಂದಾವರದ ಮೂಡುಕರೆಯಲ್ಲಿನ ಬೈಲು ಮಾಗಣೆ ಶ್ರೀ ಧೂಮಾವತಿ ದೈವಸ್ಥಾನದ ವಠಾರದಲ್ಲಿ ಭಜನಾ ಸೇವೆಯು ಜರುಗಿತು.ದೈವಸ್ಥಾನದ ವಠಾರದಲ್ಲಿ ನಡೆದ ಭಜನಾ ಸೇವೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಭಾಗವಹಿಸಿ ತಾವೇ ತಾಳವನ್ನು ನುಡಿಸಿ ಭಜನೆಯನ್ನು ಹಾಡಿದರು.
ಕಂದಾವರದ ಮೂಡುಕರೆಯಲ್ಲಿನ ಬೈಲು ಮಾಗಣೆಯ ಶ್ರೀ ಧೂಮಾವತಿ ದೈವಸ್ಥಾನವು ಇಲ್ಲಿನ ಪ್ರಸಿದ್ದ ದೈವಸ್ಥಾನವಾಗಿದೆ.ವರ್ಷಂಪ್ರತಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗುತ್ತದೆ.
Kshetra Samachara
08/05/2022 09:43 am