ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಇಂದು ಈದ್ ಉಲ್ ಫಿತರ್ ; ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬ ಆಚರಣೆ

ಮಂಗಳೂರು: ಒಂದು ತಿಂಗಳ ಕಾಲ ಪವಿತ್ರ ರಂಜಾನ್ ಮಾಸದ ಉಪವಾಸ ಆಚರಣೆಯ ಬಳಿಕ ಸೋಮವಾರ ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಇಂದು ದ.ಕ.ಜಿಲ್ಲೆಯಲ್ಲಿ ಈದ್ ಉಲ್ ಫಿತರ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು.

ರಂಜಾನ್ ತಿಂಗಳ ಚಂದ್ರ ದರ್ಶನದೊಂದಿಗೆ ಆರಂಭವಾಗುವ ಉಪವಾಸವು ಶಾವಾಲ್‌ ತಿಂಗಳ ಚಂದ್ರ ದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಶಾವಾಲ್‌ ತಿಂಗಳ ಮೊದಲ ದಿನವಾದ ಈ ದಿನವನ್ನು ‘ಈದ್ ಉಲ್ ಫಿತ್ರ್’ ಹಬ್ಬವೆಂದು ಆಚರಿಸುತ್ತಾರೆ. ಈದ್ ಉಲ್ ಫಿತರ್ ಹಿನ್ನೆಲೆಯಲ್ಲಿ ಇಂದು ಮಂಗಳೂರಿನ ಬಾವುಟಗುಡ್ಡದಲ್ಲಿರುವ ಈದ್ಗಾ ಮಸೀದಿಯಲ್ಲಿ ಮುಸ್ಲಿಮರು ಬಾಂಧವರು ಸಾಮೂಹಿಕ ನಮಾಜ್ ನೆರವೇರಿಸಿದರು.

ಈದ್ ಉಲ್ ಫಿತರ್ ದಿನದಂದು ಮಸೀದಿಯಲ್ಲಿ ಈದ್ ಪ್ರಾರ್ಥನೆಯನ್ನು ಮಾಡುವ ಮೂಲಕ ಪ್ರಾರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದ ಈದ್ಗಾ ಮಸೀದಿಯಲ್ಲಿ ನೂರಾರು ಮಂದಿ ಮುಸ್ಲಿಮರು ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದರು. ಬಳಿಕ ಎಲ್ಲರೂ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.

Edited By : Shivu K
Kshetra Samachara

Kshetra Samachara

03/05/2022 02:21 pm

Cinque Terre

2.93 K

Cinque Terre

1

ಸಂಬಂಧಿತ ಸುದ್ದಿ