ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಪೊಲೀಸ್ ಠಾಣೆಯತ್ತ ಭಕ್ತಿ ಯಾನ!; ರಥೋತ್ಸವ ರಕ್ಷಣೆ ಹೊಣೆಗೆ ಆಹ್ವಾನ

ಬ್ರಹ್ಮಾವರ: ಬ್ರಹ್ಮಾವರದ ಮಹತೋಭಾರ ದೇವಸ್ಥಾನದ ರಥೋತ್ಸವದಲ್ಲಿ ವಿಶಿಷ್ಟ ಸಂಪ್ರದಾಯವೊಂದಿದೆ. ಅದೆಂದರೆ

ಇಲ್ಲಿ ರಥೋತ್ಸವ ನಡೆಯುವ ಮುನ್ನ‌ ಪೊಲೀಸರನ್ನು ಸಾಂಪ್ರದಾಯಿಕ ಮೆರವಣಿಗೆ ಮೂಲಕ ಕರೆತರಲೇ ಬೇಕು!

ಹೌದು, ಬ್ರಹ್ಮಾವರ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವ ಸಂದರ್ಭ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಿದು.

ರಥೋತ್ಸವದ ದಿನ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಆಡಳಿತ ಮಂಡಳಿ ಸದಸ್ಯರು, ಅರ್ಚಕರು ದೇವಸ್ಥಾನದ ಧಾರ್ಮಿಕ ಕಟ್ಟುಪಾಡುಗಳಾದ ಬಿರುದು- ಬಾವಲಿ, ಚಾಮರ, ಕಟ್ಟೆ ಕೋಲು ಸಹಿತ ಬ್ಯಾಂಡು, ವಾದ್ಯ ನಾದದೊಂದಿಗೆ ಮೆರವಣಿಗೆ ಮೂಲಕ ಬ್ರಹ್ಮಾವರ ಪೊಲೀಸ್ ಠಾಣೆಗೆ ಬರುತ್ತಾರೆ.

ಬಳಿಕ ದೇವಸ್ಥಾನದ ಮುಖ್ಯಸ್ಥರು ಠಾಣಾಧಿಕಾರಿಯವರಲ್ಲಿ ದೇವಸ್ಥಾನದ ರಥೋತ್ಸವ ಸಾಂಗವಾಗಿ ನೆರವೇರಿಸಿಕೊಡುವಂತೆ ವಿನಂತಿಸುತ್ತಾರೆ. ಈ ಸಂದರ್ಭ ಠಾಣೆ ವತಿಯಿಂದ ದೇವಸ್ಥಾನಕ್ಕೆ ಹೂವು- ಹಣ್ಣು ಕಾಯಿಯನ್ನು ಸಮರ್ಪಿಸುತ್ತಾರೆ. ಬಂದವರೆಲ್ಲರಿಗೂ ತಂಪು ಪಾನೀಯವಾಗಿ ಬೆಲ್ಲದ ಪಾನಕವನ್ನು ಠಾಣೆ ಸಿಬ್ಬಂದಿ ನೀಡುತ್ತಾರೆ.

ಬಳಿಕ ಠಾಣೆಯಿಂದ 1.5 ಕಿ.ಮೀ. ದೂರ ಮೆರವಣಿಗೆ ಮೂಲಕ ಅಧಿಕಾರಿಯನ್ನು ಕರೆ ತರಲಾಗುತ್ತದೆ. ಠಾಣಾಧಿಕಾರಿ, ಗ್ರಾಮದ ಮುಖ್ಯಸ್ಥರ ಸಮ್ಮುಖದಲ್ಲಿ ತೆಂಗಿನ ಕಾಯಿಯನ್ನು ರಥಕ್ಕೆ ಒಡೆದ ಬಳಿಕ ರಥೋತ್ಸವ ಚಾಲನೆಗೊಳ್ಳುತ್ತದೆ. ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ಗುರುನಾಥ್ ಬಿ. ಹಾದಿಮನೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ.1935 ರಿಂದಲೇ ಈ ಸಂಪ್ರದಾಯ ಚಾಲ್ತಿಯಲ್ಲಿದೆ.

Edited By :
PublicNext

PublicNext

27/04/2022 09:36 am

Cinque Terre

41.05 K

Cinque Terre

0

ಸಂಬಂಧಿತ ಸುದ್ದಿ