ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ : ಭಕ್ತಿಭಾವದ ಶ್ರೀ ಕೋಡ್ದಬ್ಬು ,ತನ್ನಿಮಾನಿಗ ನೇಮೋತ್ಸವ

ಕಕ್ವ : ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಕಕ್ವ ಕೊಲಕಾಡಿ ಶ್ರೀ ಕೋಡ್ದಬ್ಬು ಧೂಮಾವತಿ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

ಎ.23 ಶನಿವಾರ ಚಪ್ಪರ ಆರೋಹಣ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ,ರಾತ್ರಿ 8:30 ಕ್ಕೆ ಭಂಡಾರ ಇಳಿಯುವ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ಕೋಡ್ದಬ್ಬು ಮತ್ತು ತನ್ನಿಮಾನಿಗ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ರಘುರಾಜ್ ಕದ್ರಿ ಬಳಗದಿಂದ ಬಬ್ಬು ಸ್ವಾಮಿ ನಾಮಸಂಕೀರ್ತನೆ ನಡೆಯಿತು.

ಎ.24 ಭಾನುವಾರ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಿತು.

ಈ ಸಂದರ್ಭ ಕೊಲಕಾಡಿ ಗುತ್ತು, ಕಕ್ವ ಗುತ್ತು, ವ್ಯವಸ್ಥಾಪನಾ ಸಮಿತಿ, ಕೋಡ್ದಬ್ಬು ಧೂಮಾವತಿ ಸೇವಾ ಯುವಕ ವೃಂದ, ಮತ್ತು ಕಕ್ವ ಕೊಲಕಾಡಿ ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

24/04/2022 04:22 pm

Cinque Terre

5.23 K

Cinque Terre

1

ಸಂಬಂಧಿತ ಸುದ್ದಿ